

ಸಂಡೂರು: ಸರ್ಕಾರಿ ಜಮೀನಿನ ಸಾಗುವಳಿ ಕಾಲಂನಲ್ಲಿ ಅಲ್ಲಿಪೀರಾ ಸ್ವಾಮಿಗಳ ಆಶ್ರಮ ಭಕ್ತಾದಿಗಳು ಅಂತಾಪುರ ಎಂದು ಇರುವ ತಾಲೂಕಿನ ಡಿ.ಅಂತಾಪುರದ ಸ.ನಂ.146-ಎ, 1.30(ಒಂದು ಎಕರೆ ಸೇಂಟ್ಸ್) ಭೂಮಿಯನ್ನು ಸಾಗುವಳಿ ಮಾಡುತ್ತಿರುವ ಹನುಮಂತಪ್ಪನ ವಿರುದ್ಧ ಕಾನೂನು ಕ್ರಮ ಜರುಗಿಸಿ, ಆಶ್ರಮಕ್ಕೆ ಭಕ್ತರಿಗೆ ಅನುಕೂಲ ಮಾಡಿಕೊಡಬೇಕೆಂದು ತಹಸೀಲ್ದಾರ್ ಅನಿಲ್‌ಕುಮಾರ್‌ಗೆ ಭಕ್ತರು ಸೋಮವಾರ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಹ ಕಾರ್ಯದರ್ಶಿ ವಿ.ಎಸ್.ಶಂಕರ್ ಮಾತನಾಡಿ, ಅಲ್ಲಿ ಪೀರಾಸ್ವಾಮಿ ಆಶ್ರಮದಲ್ಲಿ ಸಹಸ್ರಾರು ಭಕ್ತರು ಕಳೆದ 50 ವರ್ಷಗಳಿಂದ ಆರಾಧನಾ ಮಹೋತ್ಸವ, ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಅನ್ನದಾಸೋಹ, ಪ್ರತಿ ಸೋಮವಾರ ಹಾಗೂ ಗುರುವಾರ ಭಜನೆ, ಧ್ಯಾನ ಮಾಡುತ್ತಾ ಬಂದಿದ್ದೇವೆ. ಸಾಗುವಳಿ ಕಾಲಂನಲ್ಲಿ ಹನುಮಂತಪ್ಪನ ಅವರ ಹೆಸರೇ ಇಲ್ಲ. ಹೀಗಾಗಿ ಅಲ್ಲಿಪೀರಾ ತಾತನ ಭಕ್ತರ ಹೆಸರಿಗೆ ಮಾಡಿಕೊಡಬೇಕೆಂದು ಒತ್ತಾಯಿಸಿದರು.