ಅಭಿವೃದ್ಧಿ ಹರಿಕಾರ ಡಿ. ದೇವರಾಜ ಅರಸು

mkg1a
Published on

ಹೊನ್ನಾಳಿ: ಅಭಿವೃದ್ಧಿ ವಿಚಾರವಾಗಿ ಮೌನ ಕ್ರಾಂತಿ ಮಾಡಿದ ಮಾಜಿ ಸಿಎಂ ಡಿ. ದೇವರಾಜ ಅವರು ಸಮಾಜ ಸುಧಾರಣೆಯ ಹರಿಕಾರರಾಗಿದ್ದಾರೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಬಣ್ಣಿಸಿದರು.

ನಗರದ ಗುರುಭವನದಲ್ಲಿ ಭಾನುವಾರ ತಾಲೂಕು ಆಡಳಿತ, ತಾಪಂ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ 108ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಬಡತನ ನಿರ್ಮೂಲನೆಗಾಗಿ ಜಾರಿಗೆ ತಂದ 20 ಅಂಶದ ಕಾರ್ಯಕ್ರಮವನ್ನು ಶೇ. 100ರಷ್ಟು ಜಾರಿಗೆ ತಂದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹಲವಾರು ಯೋಜನೆ ಜಾರಿಗೆ ತಂದ ಧೀಮಂತ ವ್ಯಕ್ತಿ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಇಂದು ಹಿಂದುಳಿದ ವರ್ಗಗಳ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿ ಇದ್ದುಕೊಂಡು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ ಹಾಗೂ ಉಳುವವನೆ ಭೂಮಿ ಒಡೆಯ ಯೋಜನೆ ಜಾರಿಗೆ ತಂದು ತುಳಿತಕ್ಕೊಳಗಾದವರಿಗೆ ದನಿಯಾದರು ಎಂದರು.

ನಮ್ಮ ತಂದೆ ಹಾಗೂ ತಾತನ ಕಾಲದಲ್ಲಿ ನಮ್ಮದು 2650 ಎಕರೆ ಜಮೀನು ಇತ್ತು. ಆ ಸಂದರ್ಭದಲ್ಲಿ ಉಳುವವನೆ ಒಡೆಯ ಜಾರಿಗೆ ಬಂದಿದ್ದರಿಂದ, ನಮ್ಮ ಜಮೀನು ಯಾರು ಉಳುಮೆ ಮಾಡುತ್ತಿದ್ದರೋ ಅವರಿಗೆ ಭೂಮಿ ಬಿಟ್ಟುಕೊಟ್ಟೆವು ಎಂದು ನೆನಪಿಸಿಕೊಂಡರು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಬಸವರಾಜು ಉಪನ್ಯಾಸ ನೀಡಿದರು.

ತಹಸೀಲ್ದಾರ್ ತಿರುಪತಿ ಪಾಟೀಲ್, ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೃತ್ಯುಂಜಯಸ್ವಾಮಿ, ಬಿಇಒ ನಂಜರಾಜು, ತಾಲೂಕು ದೈಹಿಕ ನಿರ್ದೇಶಕ ಈಶ್ವರಪ್ಪ, ತಾಲೂಕು ಖಜಾನೆ ಅಧಿಕಾರಿ ಸುನೀಲ್, ಕುಮಾರ್ ಬರ್ಕಿ, ರೂಪಾ ಕೆ.ಎನ್., ವಿದ್ಯಾ ಎಚ್.ಪಿ., ಮಂಜುನಾಥ್ ಬಿ.ಎಂ. ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net