

ರಾಯಚೂರು ಅಡುಗೆ ಮಾಡುವ ವೇಳೆಯಲ್ಲಿ ಆಕಸ್ಮಿಕವಾಗಿ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಪಟೇಲ್ ರಸ್ತೆಯಲ್ಲಿರುವ ಉದಯ್ ಕುಮಾರ್ ಎಂಬುವರ ಮನೆಯಲ್ಲಿ ಮಂಗಳವಾರ ನಡೆದಿದೆ.
ಮನೆಯಲ್ಲಿರುವವರು ಕಚೋರಿ ಹಾಗೂ ಸಮೋಸಾ ತಯಾರಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಅದೇ ಕೊಣೆಯಲ್ಲಿ ನಾಲ್ಕು ತುಂಬಿದ ಗ್ಯಾಸ್ ಸಿಲಿಂಡರ್‌ಗಳೂ ಸಹ ಇದ್ದವು ಎಂದು ಹೇಳಲಾಗುತ್ತಿದ್ದು, ಬೆಂಕಿಯಿಂದ ಅಡುಗೆ ಸಾಮಾಗ್ರಿಗಳು ಸಂಪೂರ್ಣ ವಾಗಿ ಸುಟ್ಟು ಭಸ್ಮವಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.