ಸಿಲಿಂಡರ್ ಸ್ಫೋಟ; ನಾಲ್ಕು ಕುರಿ, ಮನೆ, 4 ಲಕ್ಷ ರೂ. ಹಣ ಸುಟ್ಟು ಭಸ್ಮ!

blg fire
Published on

ಬೆಳಗಾವಿ: ಸಿಲಿಂಡರ್ ಸ್ಫೋಟಗೊಂಡಿದ್ದು, ನಾಲ್ಕು ಕುರಿಗಳು, ಮನೆ ಹಾಗೂ 4 ಲಕ್ಷ ರೂ. ಹಣ ಸುಟ್ಟು ಕರಕಲಾಗಿರುವ ಘಟನೆ ತಾಲೂಕಿನ ಬಸವನಕುಡಚಿ ಗ್ರಾಮದಲ್ಲಿ ಸಂಭವಿಸಿದೆ.

ಅಭಿಷೇಕ್ ಕೌಲಗಿ ಎಂಬುವವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಸ್ಫೋಟದ ವೇಳೆ ಮನೆ ಮಂದಿ ಯಾರೂ ಇಲ್ಲದ ಪರಿಣಾಮ ಮಾನವ ಜೀವಹಾನಿ ಸಂಭವಿಸಿಲ್ಲ. ಆದರೆ, ನಾಲ್ಕು ಕುರಿಗಳು ಸಜೀವ ದಹನಗೊಂಡಿದ್ದು, ಮನೆ ಸುಟ್ಟು ಹೋಗಿದೆ. ಬಲಿಪಾಢ್ಯಮಿಯಂದು ಟ್ರ್ಯಾಕ್ಟರ್ ಖರೀದಿಸಲು ನಿರ್ಧರಿಸಿ ಬ್ಯಾಂಕ್​ನಿಂದ ಹಣ ತೆಗೆದು ಮನೆಯಲ್ಲಿಡಲಾಗಿತ್ತು. ಈ ಹಣ ಕೂಡ ಬೆಂಕಿಗೆ ಆಹುತಿಯಾಗಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಅಭಿಷೇಕ್ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕದ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net