ಸುಳಿಗಾಳಿ ಹಲವು ಮನೆಗಳಿಗೆ ಹಾನಿ..!

a2
Published on

ವಿಟ್ಲ: ಅಳಿಕೆ ಗ್ರಾಮದ ವದ್ವ, ಕಾನತ್ತಡ್ಕ, ಕೊಳೆಂಜಿಮಾರು ಭಾಗದಲ್ಲಿ ಸುಳಿಗಾಳಿ ಉಂಟಾಗಿ ಹಲವು ಮನೆ ಮನೆ, ದನದ ಹಟ್ಟಿ, ಕೊಟ್ಟಿಗೆ, ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ.

ಅಳಿಕೆ ಗ್ರಾಮದ ವದ್ವ ನಿವಾಸಿಗಳಾದ ಗೋಪಾಲಕೃಷ್ಣ ನಾವುಡ, ನರಸಿಂಹ ನಾವುಡ, ರಾಮ ಬೆಲ್ಚಾಡ, ಕೊಳೆಂಜಿಮಾರು ನಿವಾಸಿ ಚಂದ್ರಶೇಖರ ನಾಯ್ಕ, ಕಾನತ್ತಡ್ಕ ನಿವಾಸಿ ಅಬ್ದುಲ್ ರಝಾಕ್ ಅವರ ಮನೆ ಹಾಗೂ ಉಪಕಟ್ಟಡಗಳಿಗೆ ಹಾನಿಯಾಗಿದೆ. ಇಬ್ಬರ ಮನೆಗಳು ಭಾಗಶಃ ಸಂಪೂರ್ಣ ಹಾನಿಯಾಗಿದ್ದು, ಉಳಿದ ಇಬ್ಬರ ಮನೆಗಳು ಹಾನಿಗೊಳಲಾಗಿದೆ. ಸುಳಿಗಾಳಿಯ ಅವಾಂತರಕ್ಕೆ ಮರಗಳು ಮನೆ ಹಾಗೂ ಕಟ್ಟಡಗಳ ಮೇಲೆ ಎಸೆಯಲ್ಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net