ವಾಮಂಜೂರಿನ ಯುವಕರಿಬ್ಬರಿಂದ ಸೈಕ್ಲಿಂಗ್ ಯಾತ್ರೆ : ಕುಡ್ಲ ಟು ಕೇದಾರನಾಥಕ್ಕೆ ಪಯಣ : ಪರಿಸರ ಉಳಿಸಿ, ಅರಣ್ಯ ಬೆಳೆಸಿ ಧ್ಯೇಯವಾಕ್ಯ

cycle
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಈಗಾಗಲೇ ದೇಶದ ಹಲವು ಕಡೆಗೆ ಯಶಸ್ವಿ ಸೈಕಲ್ ಯಾತ್ರೆ ಕೈಗೊಂಡಿರುವ ವಾಮಂಜೂರಿನ ಕೆಲರೈಕೋಡಿ ನಿವಾಸಿಗಳಾದ ಪುನಿತ್ ಕುವಾರ್ ಮತ್ತು ಅಕ್ಷಿತ್ ತಿಮ್ಮಯ್ಯ ಅವರು ಮಂಗಳವಾರ ಕೆಲರೈಕೋಡಿಯ ಕೊರಗಜ್ಜ ಕಟ್ಟೆಯಲ್ಲಿ ಪ್ರಾರ್ಥಿಸಿ ಮಂಗಳೂರಿನ ಮೂಲಕ ಕೇದಾರನಾಥ ಕ್ಷೇತ್ರಕ್ಕೆ ಸೈಕ್ಲಿಂಗ್ ಯಾತ್ರೆ ಆರಂಭಿಸಿದ್ದಾರೆ.

ಈ ಬಾರಿ ‘ಪರಿಸರ ಉಳಿಸಿ, ಅರಣ್ಯ ಬೆಳೆಸಿ’ ಪ್ರಚಾರಾರ್ಥ ‘ಕುಡ್ಲ (ಮಂಗಳೂರು) ಟು ಕೇದಾರನಾಥ’ಕ್ಕೆ ಸೌಹಾರ್ದ ಸೈಕ್ಲಿಂಗ್ ಕೈಗೊಂಡಿರುವ ಪುನೀತ್ ಮತ್ತು ಮೂಲತಃ ಕೊಡಗಿನ ಅಕ್ಷಿತ್ ಈ ಹಿಂದೆ ಮಂಗಳೂರಿನಿಂದ ಕಾಶ್ಮೀರ ಹಾಗೂ ಇತರೆಡೆ ಸೈಕಲ್ ಯಾತ್ರೆ ಕೈಗೊಂಡಿದ್ದರು. ಚಾರಣಪ್ರಿಯರಾದ ಇವರು ಕೆಲರೈಕೋಡಿಯಿಂದ ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಕೇದಾರನಾಥ ದೇವಾಲಯದತ್ತ ಪ್ರಯಾಣ ಬೆಳೆಸಲಿದ್ದಾರೆ. ಅವರು ಪ್ರತಿದಿನ ಸುವಾರು 110 ಕಿ.ಮೀ. ಕ್ರಮಿಸಲಿದ್ದಾರೆ.

ಕೆಲರೈಕೋಡಿಯ ಕೊರಗಜ್ಜ ಕಟ್ಟೆಯಲ್ಲಿ ಬೆಳಗ್ಗೆ 6.30ಕ್ಕೆ ಪ್ರಯಾಣ ಆರಂಭಿಸಿರುವ ಅವರನ್ನು ಸ್ಥಳೀಯ ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ಉದ್ಯಮಿ ರಘು ಸಾಲ್ಯಾನ್ ಹಾಗೂ ಸ್ಥಳೀಯ ಪ್ರಮುಖರು ಬೀಳ್ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net