ಸೈಕಲ್ ಬಳಕೆ ಉತ್ತಮ ಆರೋಗ್ಯಕ್ಕೆ ಸಹಕಾರಿ

02-06-Shiva-3
ರಾಯಚೂರಿನಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ನಿಮಿತ್ತ ಸೈಕ್ಲಿಂಗ್ ಅಸೋಸಿಯೇಷ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಸೈಕಲ್ ಜಾಗೃತಿ ಜಾಥಾಗೆ ಶಾಸಕ ಡಾ.ಶಿವರಾಜ ಪಾಟೀಲ್ ಚಾಲನೆ ನೀಡಿದರು. ಅಸೋಸಿಯೇಷನ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ್, ಪದಾಕಾರಿಗಳಾದ ಸಂದೀಪ್ ಕಲ್ಲೂರು, ಡಾ.ಜಯಪ್ರಕಾಶ ಬೆಟ್ಟದೂರು, ವಿಶ್ವನಾಥ ಹಿರೇಮಠ, ಡಾ.ಸಕಲೇಶ ಪಾಟೀಲ್ ಬೆಟ್ಟದೂರು, ಡಾ.ಶರಣಗೌಡ, ನಾಗರಾಜ ಗಡ್ಡಾಳೆ, ಡಾ.ರವಿ ಪಾಟೀಲ್ ಇದ್ದರು.
Published on

ರಾಯಚೂರು: ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೈಕಲ್ ಬಳಕೆ ಮಾಡಲು ಮುಂದಾಗಬೇಕು. ಸೈಕಲ್ ಬಳಕೆಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಜನರು ಅದನ್ನು ಅರಿತುಕೊಳ್ಳಬೇಕು ಎಂದು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.
ನಗರದಲ್ಲಿ ಸೈಕ್ಲಿಂಗ್ ಅಸೋಸಿಯೇಷನ್‌ನಿಂದ ವಿಶ್ವ ಬೈಸಿಕಲ್ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಭಾನುವಾರ ಆಯೋಜಿಸಿದ್ದ ಸೈಕಲ್ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಜನರು ಓಡಾಟಕ್ಕೆ ವಾಹನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಸೈಕಲ್ ಬಳಕೆ ಮೂಲಕ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಸರವನ್ನು ಕಾಪಾಡಬಹುದಾಗಿದೆ ಎಂದರು.
ನಗರದ ಬಸವ ಆಸ್ಪತ್ರೆಯೀಂದ ಆರಂಭಗೊಂಡ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಡಾ.ಬಸವರಾಜ ಪಾಟೀಲ್, ಪದಾಕಾರಿಗಳಾದ ಸಂದೀಪ್ ಕಲ್ಲೂರು, ಡಾ.ಜಯಪ್ರಕಾಶ ಬೆಟ್ಟದೂರು, ವಿಶ್ವನಾಥ ಹಿರೇಮಠ, ಡಾ.ಸಕಲೇಶ ಪಾಟೀಲ್ ಬೆಟ್ಟದೂರು, ಡಾ.ಶರಣಗೌಡ, ನಾಗರಾಜ ಗಡ್ಡಾಳೆ, ಡಾ.ರವಿ ಪಾಟೀಲ್, ರವಿ ಗಣೇಕಲ್, ವಿಜಯ್ ದೋಮಕುಂಟಿ, ಪ್ರವೀಣ ಚೂಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net