ಸೈಕಲ್​ ಸವಾರಿಯಿಂದ ಆರೋಗ್ಯ ಸಧೃಢ

4Ckd2
Published on

ಚಿಕ್ಕೋಡಿ: ಆರೋಗ್ಯದ ದೃಷ್ಟಿಯಿಂದ ಸೈಕಲ್​ ಸವಾರಿ ಮಾಡುವುದು ಉತ್ತಮವಾಗಿದೆ ಎಂದು ಉಪನ್ಯಾಸಕ ವಿ.ಬಿ.ಚೌಗಲಾ ಹೇಳಿದರು.

ತಾಲೂಕಿನ ಮಜಲಟ್ಟಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀ-ಯ ಸೇವಾ ಯೋಜನೆ ಟಕದಡಿ ಬುಧವಾರ ಆಯೋಜಿಸಿದ್ದ ವಿಶ್ವ ಸೈಕಲ್​ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸದೃಢ ಶರೀರಕ್ಕೆ ಸೈಕಲ್​ ಸವಾ-ರಿ ಪೂರಕವಾಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎಚ್​.ಎಸ್​.ಟಕ್ಕನ್ನವ-ರ ಮಾತನಾಡಿ, ಮನು-ಷ್ಯನ ದೈಹಿಕ, ಮಾನಸಿಕ -ರೋ-ಗ್ಯ-ಕ್ಕಾ-ಗಿ ದಿನಂಪ್ರತಿ ಸೈಕಲ್​ ಸವಾರಿ ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಉಪನ್ಯಾಸಕ ರವೀಂದ್ರ ಕಾಗಲೆ ಮಾತ-ನಾ-ಡಿ, ಇಂಧನ ಉಳಿತಾಯ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯದ ದೃಷ್ಟಿಯಿಂದ ಸೈಕಲ್​ ಸವಾರಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು. ಸುಜಾತ ಪಾಟೀಲ, ರವಿಚಂದ್ರ ಪಾಟೀಲ, ಕಲ್ಲಪ್ಪ ಹೇಳವಿ, ಸತೀಶ ಯಶವಂತ್​, ಅಜಿತ್​ ಬಸ್ಸರಗಿ, ಎಂ.ಎ.ಮುಲ್ಲಾ, ವಂದನಾ, ಸೌಜನ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net