ಸೈಕ್ಲಿಂಗ್ ಸ್ಪರ್ಧೆಯಲ್ಲಿ ಹೊನ್ನಪ್ಪಗೆ ಬೆಳ್ಳಿ

1
ರಾಷ್ಟ್ರಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ವಿಜೇತ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ತರಬೇತುದಾರ ಬಿ.ಬಿ. ವಿಜಯನಗರ, ಕ್ರೀಡಾಪಟು ಹೊನ್ನಪ್ಪ ಧರ್ಮಟ್ಟಿ , ಯಲ್ಲೇಶ ಹುಡೇದ, ರಾಘವೇಂದ್ರ ವಂದಾಲ ಇತರರಿದ್ದರು.
Published on

ಕಟಕೋಳ: ಸಮೀಪದ ಚಂದರಗಿಯ ಎಸ್.ಎಂ. ಕಲೂತಿ ಸಂಯುಕ್ತ ಕ್ರೀಡಾವಸತಿ ಶಾಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ಈಚೆಗೆ ವಿಜಯಪುರದಲ್ಲಿ ಜರುಗಿದ 28ನೇ ರಾಷ್ಟ್ರಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

14ರ ವಯೋಮಿತಿಯ ಬಾಲಕರ ವಿಭಾಗದ 20 ಕಿಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಹೊನ್ನಪ್ಪ ಧರ್ಮಟ್ಟಿ ಬೆಳ್ಳಿ ಪದಕ, 16ರ ವಯೋಮಿತಿಯ 30 ಕಿಮೀ ವೈಯಕ್ತಿಕ ಸ್ಪರ್ಧೆ ಹಾಗು 40 ಕಿಮೀ ಗುಂಪು ಸ್ಪರ್ಧೆಯಲ್ಲಿ ಯಲ್ಲೇಶ ಹುಡೇದ ಕಂಚಿನ ಪದಕ, 18ರ ವಯೋಮಿತಿಯ 40 ಕಿಮೀ ಸ್ಪರ್ಧೆಯಲ್ಲಿ ರಾಘವೇಂದ್ರ ವಂದಾಲ ಬೆಳ್ಳಿ ಪದಕ, ಅನಿಲ ಕಾಳಪ್ಪಗೋಳ ಪುರುಷರ ವಿಭಾಗದ 60 ಕಿಮೀ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಸಾಧಕ ಕ್ರೀಡಾಪಟುಗಳು, ತರಬೇತುದಾರ ಬಿ.ಬಿ.ವಿಜಯನಗರ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net