ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ಮಂದಿರದ ದೇವರ ದರ್ಶನಕ್ಕೆ ಸೈಕಲ್ ಸವಾರಿ

IMG20240516110858-01.jpeg
Published on

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲುವಿನ ಯುವಕ ಭಾನುಪ್ರಸಾದ್ ರೆಡ್ಡಿ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ಮಂದಿರದ ದೇವರ ದರ್ಶನಕ್ಕೆ ಸೈಕಲ್ ಸವಾರಿ ಮೂಲಕ ಹೊರಟಿದ್ದಾರೆ.

ಡಿ.ಪಾಳ್ಯ ಗ್ರಾಮದಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸಾಯಿಬಾಬ ಮಂದಿರದಲ್ಲಿ ಭಾನುಪ್ರಸಾದ್ ರೆಡ್ಡಿಯು ರಾಮ ಭಕ್ತರು, ವಿಶ್ವ ಹಿಂದು ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಜತೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಯಾಣ ಆರಂಭಿಸಿದರು. ಇದಕ್ಕೆ ಶುಭಕೋರಿ ಬೀಳ್ಕೊಡಲಾಯಿತು.

ಹನುಮನ ನಾಡಿನಿಂದ (ಕರ್ನಾಟಕ) ದೂರದ ರಾಮನ ನಾಡಿಗೆ (ಉತ್ತರ ಪ್ರದೇಶದ ಅಯೋಧ್ಯೆಗೆ) ಸೈಕಲ್ ಸವಾರಿ ಮೂಲಕ ಹೊರಟಿರುವ ಭಾನುಪ್ರಸಾದ್ ರೆಡ್ಡಿಯ ನಲವತ್ತು ದಿನಗಳ ಪ್ರವಾಸವು ಸುಖಕರವಾಗಿರಲಿ ಎಂದು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಸಾಗಾನಹಳ್ಳಿ ಶಿವಕುಮಾರ್ ಶುಭ ಕೋರಿದರು.

ಯುವಕ ಭಾನುಪ್ರಸಾದ್ ರೆಡ್ಡಿ ಸಂಕಲ್ಪವೂ ನಿಜಕ್ಕೂ ಮೆಚ್ಚುವಂತದ್ದು. ಅವರು ಸೈಕಲ್ ಮೂಲಕ ಕೈಗೊಂಡಿರುವ ಅಯೋಧ್ಯೆಯ ಯಾತ್ರೆಯು ನಮಗೆಲ್ಲ ಸ್ಪೂರ್ತಿ. ಹಿಂದೂ ಧರ್ಮದ ಬಗ್ಗೆ ಮತ್ತಷ್ಟು ಜಾಗೃತಿಯಾಗಲಿ ಎಂದು ಶ್ರೀ ಶಿರಿಡಿ ಬಾಬ ಮಂದಿರದ ಧರ್ಮದರ್ಶಿ ಹರೀಶ್ ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net