

ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಗಿನ್ನೆಸ್ ದಾಖಲೆ ಮಾಡುವ ಉದ್ದೇಶದಿಂದ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಳ್ಳಾಟದ ಮುತ್ತುಚೆಲ್ವನ್ 122 ಕೆಜಿ ಸೈಕಲ್‌ನಲ್ಲಿ ದೇಶ ಪರ್ಯಟನೆಗೆ ಮುಂದಾಗಿದ್ದಾರೆ.
2021ರ ಡಿಸೆಂಬರ್ 21ರಂದು ಕೊಯಮತ್ತೂರಿನಿಂದ ಪ್ರವಾಸ ಶುರು ಮಾಡಿದ್ದು, ಈಗಾಗಲೇ 16 ರಾಜ್ಯಗಳಲ್ಲಿ ಸಂಚರಿಸಿ, ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರತಿದಿನ 50 ಕಿಲೋಮೀಟರ್ ಕ್ರಮಿಸುವ ಮುತ್ತುಚೆಲ್ವನ್ ರಾತ್ರಿಹೊತ್ತು ಸಾರ್ವಜನಿಕರ ಸಹಾಯದಿಂದ ಊಟೋಪಚಾರ ಮತ್ತು ತಂಗಲು ಸ್ಥಳ ಪಡೆದುಕೊಳ್ಳುತ್ತಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಯಾಗಿರುವ ನನಗೆ ದೇಶದ್ಯಾಂತ ಹಲವರು ಗಿನ್ನೆಸ್ ದಾಖಲೆಗೆ ಬೆಂಬಲವಾಗಿ ನಿಂತಿದ್ದಾರೆ. ಇನ್ನೂ 1 ವರ್ಷಕ್ಕೂ ಹೆಚ್ಚು ಸಮಯ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಲಾಗುವುದು ಎಂದು ಮುತ್ತುಚೆಲುವನ್ ತಿಳಿಸಿದರು.