ರೈತರ ಬೆಂಬಲಕ್ಕಾಗಿ ಸೈಕಲ್ ಯಾತ್ರೆ, ಕನ್ಯಾಕುಮಾರಿಯಿಂದ ಲಡಾಕ್‌ವರೆಗೆ ಕೇರಳದ ಯುವಕನಿಂದ ಪ್ರಯಾಣ

Cycle rally
Published on

ಪಡುಬಿದ್ರಿ: ರೈತರಿಗೆ ಬೆಂಬಲ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಧ್ಯೇಯದಲ್ಲಿ ಕನ್ಯಾಕುಮಾರಿಯಿಂದ ಲಡಾಕ್‌ವರೆಗೆ ಕೇರಳದ ಸಂಜಯ್ ಶ್ರೀಕುಮಾರ್ ಆರಂಭಿಸಿದ ಸೈಕಲ್ ಯಾತ್ರೆ ಶನಿವಾರ ಕಾಪು ತಲುಪಿದೆ.

ಕೇರಳ ಮೂಲದ ಬಡ ಕುಟುಂಬದ ದ್ವಿತೀಯ ಬಿ.ಇ. ವಿದ್ಯಾರ್ಥಿ ಸಂಜಯ್ ಈಗಾಗಲೇ 850 ಕಿ.ಮೀ. ಕ್ರಮಿಸಿ ಶನಿವಾರ ಕಾಪು ತಾಲೂಕಿನ ಮೂಳೂರಿನಲ್ಲಿ ಸಾಗುತ್ತಿದ್ದ ವೇಳೆ ಸ್ಥಳೀಯರು ಅವರನ್ನು ಸ್ವಾಗತಿಸಿದರು.

ಸುಮಾರು 3805 ಕಿ.ಮೀ. ದೂರದ ಈ ಪ್ರಯಾಣವನ್ನು ಸಂಜಯ್ ಡಿಸೆಂಬರ್‌ನಲ್ಲಿ ಆರಂಭಿಸಿದ್ದು, ಫೆಬ್ರವರಿಗೆ ಲಡಾಕ್ ಮುಟ್ಟುವ ಗುರಿ ಇಟ್ಟುಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ಸಾಧನೆ ಮಾಡುವ ಛಲ ಹಾಗೂ ಈ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆಂಬಲಿಸುವ ಸಲುವಾಗಿ ಹಾಗೂ ಆರೋಗ್ಯಕ್ಕಾಗಿ ಪೆಡಲಿಂಗ್ ಎಂಬ ಉದ್ದೇಶದಿಂದ ಯಾತ್ರೆ ಕೈಗೊಂಡಿದ್ದೇನೆ ಎಂದು ಅವರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net