ಹೆಲ್ಮೆಟ್ ಮಹತ್ವ ಸಾರಿದ ಸೈಕಲ್ ಜಾಥಾ

27 tth 04
ತುರ್ತು ಸೇವೆ ಸಂಖ್ಯೆ 112 ಹಾಗೂ ಹೆಲ್ಮೆಟ್ ಮಹತ್ವ ಸಾರುವ ಸೈಕಲ್ ಜಾಥಾಗೆ ಡಿವೈಎಸ್‌ಪಿ ಗಜಾನನ ಸುತಾರ್ ಚಾಲನೆ ನೀಡಿದರು. ಇನ್ಸ್‌ಪೆಕ್ಟರ್ ಅಶ್ವತ್ಥ ಗೌಡ, ಪಿಎಸ್‌ಐಗಳಾದ ನವೀನ್ ಮಠಪತಿ, ಶಿವಾನಂದ್, ಗಾದಿ ಲಿಂಗಪ್ಪ, ಸುಷ್ಮಾ ಇತರರಿದ್ದರು.
Published on

ತೀರ್ಥಹಳ್ಳಿ: ತುರ್ತು ಸೇವೆ ಸಂಖ್ಯೆ 112 ಹಾಗೂ ಹೆಲ್ಮೆಟ್ ಮಹತ್ವ ಸಾರುವ ಸಲುವಾಗಿ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಜಾಥಾಗೆ ಹಸಿರು ನಿಶಾನೆ ತೋರಿದ ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ಸುತಾರ್, ಹೆಲ್ಮೆಟ್ ಧರಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಹಾಗೂ ಧರಿಸದೇ ಇರುವುದರಿಂದ ಆಗುವ ತೊಂದರೆಗಳ ಕುರಿತು ತಿಳಿಸಿದರು. ತುರ್ತು ಸೇವೆಗೆ 112 ಸಂಪರ್ಕಿಸುವಂತೆ ಕೋರಿದರು.
ಇನ್ಸ್‌ಪೆಕ್ಟರ್ ಅಶ್ವತ್ಥ ಗೌಡ, ಪಿಎಸ್‌ಐಗಳಾದ ನವೀನ್ ಮಠಪತಿ, ಶಿವಾನಂದ್, ಗಾದಿ ಲಿಂಗಪ್ಪ, ಸುಷ್ಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net