ಸೈಕಲ್‌ಗೆ ಬೈಕ್ ಡಿಕ್ಕಿ, ಓರ್ವ ಮೃತ್ಯು

19102020 Kudligi Accident
Published on

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66 ತಲ್ಲೂರು ಜಂಕ್ಷನ್ ಸಮೀಪ ಶುಕ್ರವಾರ ಬೈಕ್ ಹಾಗೂ ಸೈಕಲ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಹಸವಾರ ಮಂಜುನಾಥ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೆಂಡೋನ್ಸಾ ಎಂಬುವರು ಮಂಜುನಾಥ ಎಂಬವರ ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದು, ಅತೀವೇಗ ಹಾಗೂ ನಿರ್ಲಕ್ಷೃದಿಂದ ಚಾಲನೆ ಮಾಡಿಕೊಂಡು ಬಂದು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರು, ಸೈಕಲ್ ಸವಾರ ರಾಘವೇಂದ್ರ ಹಾಗೂ ಬೈಕ್ ಸವಾರ ಮೆಂಡೋನ್ಸಾ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net