

ಬೆಳಗಾವಿ: ಇಂದಿನ ದಿನಗಳಲ್ಲಿ ಸೈಬರ್ ಕ್ರೈಂ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸೈಬರ್ ಕ್ರೈಂ ಕುರಿತು ವಿದ್ಯಾರ್ಥಿಗಳು ಜಾಗೃತರಾಬೇಕು ಎಂದು ಸೈಬರ್ ಕ್ರೈಂ ಆರಕ್ಷಕ ಠಾಣೆ ಅಧಿಕಾರಿ ಎಲ್. ಎಸ್. ಚಿವಟಗುಂಡಿ ಹೇಳಿದರು.
ನಗರದ ಭರತೇಶ ಶಿಕ್ಷಣ ಸಂಸ್ಥೆ, ಜಾನಕೀಬಾಯಿ ಗುಂಡಪ್ಪ ನಾವಗೇಕರ ದೇಸಾಯಿ, ಭರತೇಶ ಕಾಲೇಜ್ ಆಫ್ ಕಾಮರ್ಸ್ ಮಹಾವಿದ್ಯಾಲಯದ ಯುಥ್ ರೇಡ್ ಕ್ರಾಸ್ ಘಟಕದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗಾಗಿ ಸೈಬರ್ ಕ್ರೈಂ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಮ್.ಡಿ.ಯಾದವಾಡ (ಹೆಚ್.ಸಿ) ಮಾತನಾಡಿ, ಆನ್‌ಲೈನ್ ವಂಚಕರ ವಂಚನೆಯ ವಿವಿಧ ಮಾರ್ಗಗಳ ಕುರಿತು ವಿದ್ಯಾರ್ಥಿಗಳಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಯುಥ್ ರೇಡ್ ಕ್ರಾಸ್ ಘಟಕದ ಮುಖ್ಯಸ್ಥ ಕಾಶಿನಾಥ ಶೃಂಗೇರಿ, ಎನ್‌ಎಸ್‌ಎಸ್ ಘಟಕದ ಸಂಚಾಲಕ ಯಲ್ಲಪ್ಪ ದಬಾಲಿ ಇತರರಿದ್ದರು. ವಿಶ್ವನಾಥ ವಿಜಾಪುರೆ ನಿರೂಪಿಸಿದರು. ಭಾವನಾ ಹುಲಿಕವಿ ವಂದಿಸಿದರು.