ಮಾದಕ ದ್ರವ್ಯ ವ್ಯಸನದಿಂದ ಜೀವನ ನಾಶ : ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್. ಕರೆ

New Project (57)
Published on

ಮೂಲ್ಕಿ: ಕ್ಷಣಿಕ ಸುಖ ನೀಡುವ ಮಾದಕ ವಸ್ತುಗಳ ವ್ಯಸನ ಜೀವನದ ಗುರಿಯನ್ನು ನಾಶಮಾಡುವ ಕಾರಣ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು ಎಂದು ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್. ಹೇಳಿದರು.

ಮೂಲ್ಕಿ ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯಲ್ಲಿ ಮಂಗಳವಾರ ಮಾದಕ ವ್ಯಸನಗಳ ನಿರ್ಮೂಲನೆ, ಸೈಬರ್ ಕ್ರೈಂ, ಸಮೂಹ ಮಾಧ್ಯಮಗಳ ದುಷ್ಪರಿಣಾಮಗಳ ಬಗ್ಗೆ ದೃಶ್ಯ ಮಾಧ್ಯಮದ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಮಂಗಳೂರು ಪೂರ್ವ ಸಂಚಾರಿ ಠಾಣೆ ನಿರೀಕ್ಷಕ ಶಿವಕುಮಾರ್ ಮುಗ್ಗಳ್ಳಿ, ಸಂಚಾರಿ ನಿಯಮ ಪಾಲನೆ ಹಾಗೂ ಸುರಕ್ಷತೆ ಕುರಿತಾದ ಮಾಹಿತಿ ದೃಶ್ಯ ಮಾಧ್ಯಮದ ಮೂಲಕ ಮನವರಿಕೆ ಮಾಡಿದರು.

ಆಡಳಿತ ಮಂಡಳಿ ಅಧ್ಯಕ್ಷ ಕೆ.ನರಸಿಂಹ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಕಾಮಾಕ್ಷಿ ಆರ್.ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು. ಸಹಶಿಕ್ಷಕಿ ಅಮಿತಾ ಕೆ. ವಂದಿಸಿದರು. ಶ್ರೀಲಕ್ಷ್ಮೀಕಾಮತ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net