ಮಂತ್ರಾಲಯ ಮಠದ ಆದಾಯದ ಮೇಲೆ ಸೈಬರ್ ಕಳ್ಳರ ಕಣ್ಣು *ಖೊಟ್ಟಿವೆಬ್ ಸೈಟ್ ಸೃಷ್ಟಿಸಿ ಭಕ್ತರಿಗೆ ವಂಚಿಸುವ ಜಾಲ ಪತ್ತೆ, *ವಸತಿ ಸೇರಿ ವಿವಿದ ಸೇವೆ ಒದಗಿಸುವ ಹೆಸರ‌್ನಿಲ್ಲಿ ವಂಚನೆ ಬಯಲು

mantralaya
mantralaya
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಆದಾಯದ ಮೇಲೆ ವಂಚಕರ ಕಣ್ಣು ಬಿದ್ದಿದೆ. ಭಕ್ತರಿಗೆ ವಸತಿ ಸೇರಿ ವಿವಿಧ ಸೇವೆಗಳನ್ನು ಒದಗಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಭಕ್ತರಿಗೆ ವಂಚಿಸುವ ಜಾಲ ವ್ಯಾಪಕವಾಗಿದ್ದು, ಭಕ್ತರಲ್ಲಿ ಮಠದ ಆಡಳಿತ ಜಾಗೃತಿ ಮೂಡಿಸುವ ಕಾರ್ಯ ಮಾಡಲಾರಂಭಿಸಿದೆ.

ಮಂತ್ರಾಲಯಕ್ಕೆ ದಿನದಿಂದ ದಿನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರುಮುಖವಾಗಿದೆ. ಪ್ರತಿ ತಿಂಗಳೂ ಶ್ರೀಮಠಕ್ಕೆ ಕೋಟ್ಯಂತರ ರೂ. ಆದಾಯ ಹರಿದುಬರುತ್ತಿದೆ. ಅಂತೆಯೇ ಆದಾಯದ ಮೇಲೆ ಸೈಬರ್ ಕಳ್ಳರ ಕಣ್ಣುಬಿದ್ದಿದೆ. ಹೀಗಾಗಿ ಮಠದ ಹೆಸರಿನಲ್ಲಿ ಖೊಟ್ಟಿ ವೆಬ್ಸೈಟ್ ಸೃಷ್ಟಿಸಿ ವಸತಿ ಸೇರಿ ವಿವಿಧ ಸೇವೆ ಒದಗಿಸುವುದಾಗಿ ಭಕ್ತರನ್ನು ವಂಚಿಸುವುದು ತೀವ್ರಗೊಂಡಿದ್ದು ಆದಾಯಕ್ಕೆ ಹಿನ್ನಡೆಯುಂಟು ಮಾಡುವ ಕಾರ್ಯಕ್ಕೆ ಕಿಡಿಗೇಡಿಗಳು ಮುಂದಾಗಿದ್ದಾರೆ.

ಎನೀದು ವಂಚನೆ?

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಅರಾಧನೆ ಸಮೀಪಿಸುತ್ತಿದ್ದಂತೆ ರಾಯರ ಭಕ್ತರು ಮುಂಗಡವಾಗಿ ವಸತಿಗೃಹವನ್ನು ಬುಕ್ ಮಾಡುವುದು ಸಾಮಾನ್ಯವಾಗಿದೆ. ಆದರಂತೆ ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಅಕ್ಷಿತಾ ಎಂಬುವರಿಗೆ ಮಠಕ್ಕೆ ಸೇರಿದ ವಿಜಯೇಂದ್ರ ವಸತಿ ಗೃಹದ ಆನ್‌ಲೈನ್ ಹೆಸರಿನಲ್ಲಿ ಇದ್ದ ವಸತಿ ಗೃಹವನ್ನು ಬುಕ್ ಮಾಡಲು ಮುಂದಾಗಿದ್ದು, ಅದರಂತೆ ವಂಚಕರು ಮುಂಗಡವಾಗಿ 2000 ರೂ. ಜಮೆ ಮಾಡಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡದೆ ವಂಚಿಸಿದ್ದಾರೆ.

ಗುರುರಾಯರ ಸನ್ನಿಧಿಯಲ್ಲಿ ಈ ರೀತಿಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಠದ ಹೆಸರನ್ನು ಬಳಸಿಕೊಂಡು ಭಕ್ತರನ್ನು ವಂಚಿಸಿ ಕೊಠಡಿಗಳು, ಪ್ರಸಾದ ಸೇರಿದಂತೆ ಇತ್ಯಾದಿ ಸೇವೆಗಳ ಬುಕಿಂಗ್‌ಗೆ ಅವರಿಂದ ಹಣವನ್ನು ಪಡೆದು ವಂಚಿಸಲಾಗಿದೆ. ಈ ಕುರಿತಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಇಂತಹ ಘಟನೆಗಳು ಮತ್ತೆ ಜರುಗದಂತೆ ಮತ್ತು ಭಕ್ತರು ಮೋಸ ಹೋಗದಂತೆ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದ್ದು, ಭಕ್ತರಿಗೆ ವಂಚನೆ ಬೆಳಕಿಗೆ ಬೆನ್ನಲ್ಲೇ ಶ್ರೀಮಠದಿಂದ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ಆಂಧ್ರದ ಕರ್ನೂಲ್ ಸೈಬರ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಶ್ರೀಮಠದಿಂದ ನಿರಂತರ ಪ್ರಕಟಣೆ

ವಂಚಕರ ಕರೆ, ಪೋಸ್ಟ್, ಮೆಸೇಜ್ ನಂಬಿ ನಕಲಿ ಯುಪಿಐ ಐಡಿಗಳಿಗೆ ಹಣ ಹಾಕದಂತೆ ಮಠ ಎಚ್ಚರಿಕೆ ನೀಡಿದ್ದು, ವಂಚಕರಿಂದ ಕರೆ, ಮೆಸೇಜ್ ಬಂದರೆ ಸೈಬರ್ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯಕ್ಕೆ ಕೊಠಡಿಗಳು ಅಥವಾ ಸೇವೆಗಳನ್ನು ಕಾಯ್ದಿರಿಸಲು ಮತ್ತು ದೇಣಿಗೆ ಸಂಗ್ರಹಿಸಲು ಯಾವುದೇ ವ್ಯಕ್ತಿ, ಏಜೆನ್ಸಿಗೆ ಅಧಿಕಾರ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಶ್ರೀ ಮಠದ ಪ್ರತಿ ವಸತಿ ಗೃಹಗಳ ಬುಕ್ಕಿಂಗ್‌ಗೆ ಡಿಡಿಡಿ.ಠ್ಟಞಠಿ.ಟ್ಟಜ. ಮೂಲಕ ಮಾತ್ರ ಬುಕ್ಕಿಂಗ ಮಾಡಿಕೊಳ್ಳುವಂತೆ ಭಕ್ತರಿಗೆ ಸಲಹೆ ನೀಡಿದೆ. ಈ ಬಗ್ಗೆ ಮಂತ್ರಾಲಯ ಮಠದಿಂದ ಭಕ್ತರಿಗೆ ಎಚ್ಚರವಹಿಸುವಂತೆ ಸಲಹೆ ನೀಡಲಾಗಿದ್ದು, ಇಂತಹ ಯಾವುದೇ ಘಟನೆಗಳನ್ನು ಅನುಭವಿಸಿದ್ದರೆ, ವಂಚಕರ ವಿರುದ್ಧ ದೂರು ದಾಖಲಿಸುವಂತೆ ತಿಳಿಸಿದ್ದಾರೆ.

ಶ್ರೀಮಠದ ಹೆಸರಿನಲ್ಲಿ ಭಕ್ತರಿಂದ ಹಣ ವಂಚನೆ ಮಾಡುವವರ ವಿರುದ್ಧ ಶ್ರೀಮಠದ ವತಿಯಿಂದ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಕರ್ನೂಲ್ ಸೈಬರ್ ಠಾಣೆಗೆ ವರ್ಗವಣೆ ಮಾಡಲಾಗಿದೆ. ಯಾವುದೇ ವ್ಯಕ್ತಿಗಳು ಮಂತ್ರಾಲಯದ ಹೆಸರಿನಲ್ಲಿ ಹಣ ಕೇಳಿದರೆ ತಕ್ಷಣವೇ ದೂರು ದಾಖಲು ಮಾಡಲು ಸೂಚನೆ ನೀಡಲಾಗಿದೆ.

ಡಾ.ಎಸ್.ಕೆ.ಶ್ರೀನಿವಾಸರಾವ್ ಮ್ಯಾನೇಜರ್ ಶ್ರೀಮಠ ಮಂತ್ರಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net