800 ರೂ. ಲಾಭ ಕೊಟ್ಟು 4.77 ಲಕ್ಷ ರೂ. ವಂಚಿಸಿದ್ರು

Cibra
Published on

ಹಾವೇರಿ: ರೆಂಟ್​ ಎಂಬ ಗಳಿಕೆ ಆಪ್​ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಗಳಿಸಬಹುದು ಎಂದು 800 ರೂ. ಲಾಭ ಕೊಟ್ಟು 4.77 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಪೊಲೀಸ್​ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರ ರಂಗನಾಥ ನಗರದ ಭೀಮಪ್ಪ ಜಟ್ಟೆಪ್ಪ ಕರಿಭೀಮಣ್ಣನವರ ಎಂಬುವರಿಗೆ ವಂಚಿಸಿರುವುದು.

ಇವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ರೆಂಟ್​ ಎಂಬ ಗಳಿಕೆ ಆಪ್​ನಲ್ಲಿ ಹಣ ಹೂಡಿಕೆ ಮಾಡಿದರೆ ನಿಮಗೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿದ್ದಾನೆ. ಅದರಂತೆ ಭೀಮಪ್ಪ ಹಾಕಿದ ಹಣಕ್ಕೆ 800 ರೂ. ಲಾಭ ನೀಡಿ ನಂಬಿಸಿದ್ದಾನೆ. ನಂತರ ಅವರಿಂದ 4.77 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net