ಶೇ. 80ರಷ್ಟು ಲಾಭಾಂಶ ಕೊಡುವುದಾಗಿ ನಂಬಿಸಿ 36.37 ಲಕ್ಷ ರೂ. ವಂಚನೆ

Cibra
Published on

ಹಾವೇರಿ: ಜಯಶ ಲಾಜಿಸ್ಟಿಕ್​ ವಿನ್ನಿಂಗ್​ ಟುಗೇದರ್​ನಲ್ಲಿ ಹೂಡಿಕೆ ಮಾಡಿದರೆ ಶೇ. 80ರಷ್ಟು ಲಾಭಾಂಶ ನೀಡಲಾಗುವುದು ಎಂದು ನಂಬಿಸಿ ಮೆಣಸಿನಕಾಯಿ ವ್ಯಾಪಾರಸ್ಥರೊಬ್ಬರಿಗೆ ಬರೋಬ್ಬರಿ 36.37 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಡಗಿ ಪಟ್ಟಣದ ಶಿವಕುಮಾರ ಕರಬಸಪ್ಪ ಮಾಳೇನಹಳ್ಳಿ (50) ಎಂಬುವರಿಗೆ ಮೋಸ ಮಾಡಿರುವುದು.

ಇವರು ಗ್ರೌನ್​ ಸ್ಟಾಕ್​ ಎಕ್ಸಚೆಂಜ್​ ಪ್ಲಾಟಾಮ್​ರ್ ಎಂಬ ವೆಬ್​ಸೈಟ್​ನಲ್ಲಿ ಟ್ರೇಡಿಂಗ್​ ಮಾಡುತ್ತಿದ್ದ ಸಮಯದಲ್ಲಿ ಯಾರೋ ಅಪರಿಚಿತರು ನಮ್ಮಲ್ಲಿ ಹೂಡಿಕೆ ಮಾಡಿದರೆ ಶೇ. 10ರಷ್ಟು ಲಾಭಾಂಶ ಕೊಡುವುದಾಗಿ ಹೇಳಿದಾಗ, ಶಿವಕುಮಾರ ಆರಂಭದಲ್ಲಿ 6 ಸಾವಿರ ರೂ. ಹಾಕಿದ್ದಾರೆ. ಅದಕ್ಕೆ ಪ್ರತಿಯಾಗಿ ಅವರು 600 ರೂ. ಲಾಭಾಂಶ ಹಾಕಿದ್ದಾರೆ.

ನಂತರ ಬೇರೊಂದು ಲಿಂಕ್​ ಕಳುಹಿಸಿ ಇದಕ್ಕೆ ಲಾಗಿನ್​ ಮಾಡಿ ಹೂಡಿಕೆ ಮಾಡಿದರೆ ಶೇ. 80ರಷ್ಟು ಲಾಂಭಾಶ ಕೊಡುತ್ತೇವೆ ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಶಿವಕುಮಾರ ವಿವಿಧ ಬ್ಯಾಂಕ್​ ಖಾತೆಗಳಿಂದ 36.37 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಹಣ ಹಾಕಿಸಿಕೊಂಡ ವಂಚಕರು ವಾಪಸ್​ ನೀಡದೆ ಮೋಸ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net