

ಹುಬ್ಬಳ್ಳಿ: ರೈಲ್ವೆ ಇಲಾಖೆಯ ಮಹಿಳಾ ಲೋಕೋ ಪೈಲೆಟ್ವೊಬ್ಬರ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು, ಅವರಿಗೆ ಗೊತ್ತಾಗದಂತೆ 57 ಸಾವಿರ ರೂ. ವಂಚಿಸಿದ್ದಾರೆ.
ಜಾರ್ಖಂಡ್ ಮೂಲದ ಇಲ್ಲಿನ ಹಾಸನ ಜಿಲ್ಲೆಯ ಅರಸಿಕೆರೆ ನಿವಾಸಿ ಜ್ಯೋತಿಕುಮಾರ ಠಾಕೂರ ವಂಚನೆಗೀಡಾದವರು. ಜ್ಯೋತಿ ಅವರು ಕರ್ತವ್ಯದ ವೇಳೆ ಗದಗ ರಸ್ತೆಯ ಆರ್ಪಿಎ್ ವಿಶ್ರಾಂತಿ ಗೃಹದಲ್ಲಿದ್ದಾಗ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದ ವಂಚಕರು ಅವರಿಗೆ ಒಟಿಪಿ ಕಳುಹಿಸಿದ್ದಾರೆ. ನಂತರ ಅವರ ಗಮನಕ್ಕೆ ಬಾರದಂತೆ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.