

ಘಟಪ್ರಭಾ: ಸಮೀಪದ ಶಿರಢಾಣದ ಡಾ.ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಸೋಮವಾರ ನಿಡಸೋಸಿಯ ಎಸ್‌ಜೆಪಿಎನ್ ಬಿಸಿಎ ಮಹಾವಿದ್ಯಾಲಯದ ವತಿಯಿಂದ ಸೈಬರ್ ವಂಚನೆ ಹಾಗೂ ಸುರಕ್ಷತೆ ಅರಿವು ಕಾರ್ಯಕ್ರಮ ಜರುಗಿತು.
ಪುಣೆಯ ಕ್ವಿಕ್‌ಹೀಲ್ ಫೌಂಡೇಶನ್ ಹಾಗೂ ನಿಡಸೋಸಿಯ ಎಸ್‌ಜೆಪಿಎನ್ ಬಿಸಿಎ ಮಹಾವಿದ್ಯಾಲಯದ ಸೀಮಾ ಕಟ್ಟಿಮನಿ ಹಾಗೂ ಆರತಿ ಶಮನೇವಾಡಿ ವೈರಸ್ ಹಾವಳಿಯಿಂದ ಕಂಪ್ಯೂಟರ್ ಹಾಗೂ ಮೊಬೈಲ್ ಹಾನಿ ತಡೆ, ಹಣಕಾಸು ವಂಚನೆ, ಬೌದ್ಧಿಕ ಸ್ವತ್ತು ವಂಚನೆ, ಅಶ್ಲೀಲ ತಾಣಗಳ ಮೋಸ, ವಿವಾಹ ಹಾಗೂ ಉದ್ಯೋಗ ವಂಚನೆ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಿದರು.
ಮುಖ್ಯಶಿಕ್ಷಕ ಮೇಘರಾಜ ಸಾಂವಗಾಂವ, ಅಜಿತ ಹೆಗಡೆ, ಸಾಗರ ವಾಳಕಿ, ಮಾರುತಿ ಪಾಟೀಲ, ಶಶಿಧರ ಕರಾಡೆ, ಪೂರ್ಣಿಮಾ ಮೆಳವಂಕಿ, ಪ್ರಭಾವತಿ ಪತ್ತಾರ ಹಾಗೂ ಗಾಯತ್ರಿ ಜಗಜಂಪಿ ಇತರರಿದ್ದರು.