

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವ ಗ್ರಾಹಕರೇ ಎಚ್ಚರ.. ಎಚ್ಚರ.. ಎಚ್ಚರ…
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ 2023ರ ಜನವರಿಯಿಂದ ಜೂನ್ 16ರವರೆಗೆ (ಐದೂವರೆ ತಿಂಗಳಲ್ಲಿ) ಸಾರ್ವಜನಿಕರು ಸೈಬರ್ ವಂಚಕರ ಮೋಸಕ್ಕೆ ಒಳಗಾಗಿ 6.66 ಕೋಟಿ ರೂ. ಕಳೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಘಂಟಿಕೇರಿಯಲ್ಲಿರುವ ಸಿಇಎನ್ ಕ್ರೈಂ (ಸೈಬರ್, ಎಕನಾಮಿಕ್ ಮತ್ತು ನಾರ್ಕೊಟಿಕ್ಸ್) ಪೊಲೀಸ್ ಠಾಣೆಯಲ್ಲಿ 210 ಪ್ರಕರಣ, ಧಾರವಾಡದಲ್ಲಿರುವ ಸಿಇಎನ್ ಅಪರಾಧ ಠಾಣೆಯಲ್ಲಿ 14 ಸೇರಿ ಒಟ್ಟು 224 ಪ್ರಕರಣ ದಾಖಲಾಗಿವೆ. ಇವುಗಳ ಪೈಕಿ ಗ್ರಾಹಕರ ಬ್ಯಾಂಕ್ ಖಾತೆಗಳಿಂದ ಡೆಬಿಟ್ ಆಗಿದ್ದ 1.21 ಕೋಟಿ ರೂ. ರಿಕವರಿ ಮಾಡಿಸಲಾಗಿದೆ.
ಅದೇ ರೀತಿ ಕಳೆದ ವರ್ಷ ಹುಬ್ಬಳ್ಳಿ ಠಾಣೆ ಮತ್ತು ಧಾರವಾಡ ಠಾಣೆ (ಕಲಘಟಗಿ, ಕುಂದಗೋಳ, ಅಣ್ಣಿಗೇರಿ, ಅಳ್ನಾವರ ತಾಲೂಕು ಒಳಗೊಂಡು) ಸೇರಿ ಒಟ್ಟು 389 ಪ್ರಕರಣ ದಾಖಲಾಗಿದ್ದವು. ಜನರು 6.60 ಕೋಟಿ ರೂ. ಕಳೆದುಕೊಂಡಿದ್ದರು. ಆ ಪೈಕಿ ಪೊಲೀಸರು 90.41 ಲಕ್ಷ ರೂ. ರಿಕವರಿ ಮಾಡಿದ್ದರು. ಅಚ್ಚರಿ ಎಂದರೆ ಕಳೆದ ವರ್ಷ 12 ತಿಂಗಳಲ್ಲಿ 6.60 ಕೋಟಿ ರೂ. ಕಳೆದುಕೊಂಡಿದ್ದರೆ, ಈ ವರ್ಷ ಜನರು ಐದೂವರೆ ತಿಂಗಳಲ್ಲಿ 6.66 ಕೋಟಿ ರೂ. ಕಳೆದುಕೊಂಡಿದ್ದಾರೆ.
ಬಹುಮಾನದ ಹೆಸರಲ್ಲಿ ವಂಚನೆ: ನಿಮ್ಮ ಮೊಬೈಲ್ ನಂಬರ್ ಬಹುಮಾನಕ್ಕೆ ಆಯ್ಕೆಯಾಗಿದೆ ಎಂದು ಖದೀಮರು ಮೊದಲು ಮೊಬೈಲ್ ಫೋನ್‌ಗೆ ಮೆಸೇಜ್ ಕಳುಹಿಸುತ್ತಾರೆ. ಬಹುಮಾನ ಪಡೆಯಲು ಮೆಸೇಜ್ ಕೆಳಗಿರುವ ಲಿಂಕ್ ಒತ್ತಲು ತಿಳಿಸುತ್ತಾರೆ.
ಲಿಂಕ್ ಕ್ಲಿಕ್ ಮಾಡಿದರೆ ಸಾಕು ಅವರು ನಿಮಗೆ ಕೆಲ ಟಾಸ್ಕ್‌ಗಳನ್ನು ಕೊಡುತ್ತ ಹೋಗುತ್ತಾರೆ. ಆಗ ಗ್ರಾಹಕರು ಚಾಟ್ ಮಾಡುತ್ತಿರುವ ಗುಂಪಿಗೆ ಖದೀಮರ ಕಡೆಯ 10 ರಿಂದ 12 ಸದಸ್ಯರು ಜಾಯಿನ್ ಆಗುತ್ತಾರೆ. ಅವರು ನಿಮ್ಮನ್ನು ಹುರಿದುಂಬಿಸುವ ಸಲುವಾಗಿ ಹೌದು ನಾವೂ ಟಾಸ್ಕ್ ಅನ್ನು ಪೂರ್ಣಗೊಳಿಸಿ 5 ಲಕ್ಷ, 10 ಲಕ್ಷ ರೂ. ಬಹುಮಾನ ಪಡೆದಿದ್ದೇವೆ ಎಂದು ಕಮೆಂಟ್ಸ್ ಹಾಕುತ್ತಾರೆ. ಆಗ ಜನರು ಹಣದ ಆಸೆಗಾಗಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ನೀಡುತ್ತಾರೆ. ಬಳಿಕ ಖದೀಮರು ಹಂತ ಹಂತವಾಗಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ.
ಇತ್ತೀಚೆಗೆ ಟೆಲಿಗ್ರಾಮ್ ಆ್ಯಪ್, ಮದುವೆಗೆ ಸಂಬಂಧಿಸಿದ ಕೆಲ ಆ್ಯಪ್‌ಗಳ ಮೂಲಕ ಮೊಬೈಲ್ ಫೋನ್ ನಂಬರ್ ಪಡೆಯುವ ಸೈಬರ್ ವಂಚಕರು ಕೆಲಸಕ್ಕೆ ಸರ್ಚ್ ಮಾಡುವವರು, ವಿವಿಧ ಕಂಪನಿಗಳ ಕನ್ಸುಮರ್ ಕೇರ್ ಸರ್ಚ್ ಮಾಡುವವರ ನಂಬರ್ ಪಡೆದು ಅವರಿಗೆ ಕರೆ ಅಥವಾ ಮೆಸೇಜ್ ಮಾಡಿ ಹಣ ಲಪಟಾಯಿಸಿರುವ ಕುರಿತು ಹೆಚ್ಚಿನ ದೂರುಗಳು ಬರುತ್ತಿವೆ ಎನ್ನುತ್ತಾರೆ ಸಿಇಎನ್ ಠಾಣೆ ಹಿರಿಯ ಅಧಿಕಾರಿಗಳು.
ಸಾಲ ನೀಡುವ ಚೀನಿ ಆ್ಯಪ್: ತುರ್ತು ಸಾಲ ನೀಡುವ ಕೆಲ ಚೀನಿ ಆ್ಯಪ್‌ಗಳು ಇವೆ. ಅವರು ತುರ್ತಾಗಿ 5 ರಿಂದ 10 ಸಾವಿರ ರೂ. ಸಾಲ ನೀಡುತ್ತಾರೆ. ಬಳಿಕ ಅದಕ್ಕೆ 3 ಪಟ್ಟು ಬಡ್ಡಿ ಹಾಕಿ ಹಣ ನೀಡುವಂತೆ ಒತ್ತಾಯಿಸುತ್ತಾರೆ. ಕೊಡದಿದ್ದರೆ, ನಿಮ್ಮ ವ್ಯವಹಾರ ಸರಿಯಿಲ್ಲ, ಹಣ ಮರು ಪಾವತಿ ಮಾಡಿಲ್ಲ ಎಂದು ನಿಮ್ಮ ಸ್ನೇಹಿತರು, ಮತ್ತಿತರ ಗುಂಪುಗಳಿಗೆ ಮೆಸೇಜ್ ಹಾಕುವುದಾಗಿ ಬೆದರಿಕೆ ಹಾಕಿರುವ ದೂರು ದಾಖಲಾಗಿವೆ.
ವಂಚಕರು ಸಾರ್ವಜನಿಕರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡ ಕೂಡಲೇ ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆ 1930ಗೆ ಕರೆ ಮಾಡಿ ದೂರು ನೀಡಬೇಕು. ಇಲ್ಲವೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಬೇಗ ದೂರು ನೀಡಿದರೆ ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗುವುದನ್ನು ತಡೆಯಲು