'ನಿನ್ನೇ ಮದುವೆ ಆಗ್ತೇನೆ ಚಿನ್ನಾ ಅದಕ್ಕೂ ಮೊದ್ಲು ಮನೆ ಬೇಡ್ವಾ.. ಸ್ವಲ್ಪ ಹಣ ಅಕೌಂಟ್​ಗೆ ಹಾಕು.!'

CYBER CRIME 8 MAY 20
Published on

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ 10 ಲಕ್ಷ ರೂ.ಪಡೆದು ಯುವತಿಗೆ ಮೋಸ ಮಾಡಿದ್ದಾನೆ. ಶಿವಾಜಿನಗರದ 26 ವರ್ಷದ ಯುವತಿ ಮೋಸಕ್ಕೆ ಒಳಗಾದವರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವತಿ, ಶಾದಿಡಾಟ್ ಕಾಂನಲ್ಲಿ ತನ್ನ ಸ್ವ-ವಿವರ ಅಪ್​ಲೋಡ್ ಮಾಡಿದ್ದರು.

ಆಕೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ಹೇಳಿದ್ದಾನೆ. ವಿವಾಹಕ್ಕೂ ಮೊದಲು ಹೊಸ ಮನೆ ನಿರ್ಮಾಣ ಮಾಡಬೇಕು. ಸ್ವಲ್ಪ ಹಣ ಬೇಕೆಂದು ಹೇಳಿ ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾನೆ. ಮತ್ತೆ ತಾಯಿಗೆ ಆರೋಗ್ಯ ಸರಿ ಇಲ್ಲವೆಂದು ಹಣ ಕೇಳಿದ್ದಾನೆ.

ಇದೇ ರೀತಿ ಸಬೂಬು ಹೇಳಿ 10.31 ಲಕ್ಷ ರೂ. ಪಡೆದಿದ್ದಾನೆ. ಪದೇಪದೆ ಹಣ ಕೇಳುತ್ತಿದ್ದ ಕಾರಣ ಯುವತಿಗೆ ಅನುಮಾನ ಬಂದು ದೂರು ನೀಡಿದ್ದಾರೆ ಎಂದು ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net