

ಮಂಗಳೂರು: ಪಾರ್ಟ್‌ಟೈಮ್ ಉದ್ಯೋಗ ಕೊಡಿಸುವುದಾಗಿ ಹೇಳಿ ಎರಡು ಪ್ರಕರಣದಲ್ಲಿ ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ೆ.5ರಂದು ಲ್ಗುಣಿ ಎಂಬ ಹೆಸರಿನ ಟೆಲಿಗ್ರಾಂ ಖಾತೆಯಿಂದ ಪಾರ್ಟ್ ಟೈಮ್ ಜಾಬ್ ಬಗ್ಗೆ ಒಂದು ಸಂದೇಶ ಬಂದಿದ್ದು, ಅದರಂತೆ ದೂರುದಾರರು ಮಾಹಿತಿ ವಿಚಾರಿಸಿದ್ದಾರೆ. ಇದಕ್ಕೆ ಆರೋಪಿ ಆನ್‌ಲೈನ್ ಮೂವಿ ಟಿಕೆಟ್ ರೇಟಿಂಗ್ ಉದ್ಯೋಗ ಎಂದು ನಂಬಿಸಿ, ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿ ಅದರಲ್ಲಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್ ಹಾಕಿ ಕಮೀಷನ್ ಹಣ ಪಡೆದುಕೊಳ್ಳುವುದಾಗಿ ತಿಳಿಸಿದ್ದ. ಅದರಂತೆ ಮಾಡಿದಾಗ ದೂರುದಾರರಿಗೆ 1 ಸಾವಿರ ರೂ. ಕಮಿಷನ್ ನೀಡಿದ್ದಾರೆ. ನಂತರ ಜಾಬ್ ಮುಂದುವರಿಸಲು 10,500 ರೂ. ಪಾವತಿಸುವಂತೆ ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿದ್ದು, ಅದರಂತೆ ದೂರುದಾರರು ಪಾವತಿಸಿದ್ದಾರೆ. ನಂತರ ಅದೇ ದಿನ ಹೆಚ್ಚಿನ ಕಮಿಷನ್ ಪಡೆಯಬೇಕಾದರೆ, 29,936ರೂ. ಪಾವತಿಸುವಂತೆ ತಿಳಿಸಿದ್ದಾರೆ. ಅದನ್ನೂ ನಂಬಿ ಖಾತೆಗೆ ಜಮಾ ಮಾಡಿದ್ದಾರೆ. ಹೀಗೆ ದೂರುದಾರರು ಹಂತ ಹಂತದಲ್ಲಿ ಒಟ್ಟು 1,14,901 ರೂ. ಪಾವತಿಸಿ ವಂಚನೆಗೊಳಗಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೊಹಮ್ಮದ್ ನೆಲ್ಲಿಕಾರ್ ಎಂಬುವರಿಗೆ ಟೆಲಿಗ್ರಾಮ್ ಲಿಂಕ್ ಕಳುಹಿಸಿ ಹಣವನ್ನು ತೊಡಗಿಸಿ ಆನ್‌ಲೈನ್ ಮೂಲಕ ದ್ವಿಗುಣ ಮಾಡಲು ಟಾಸ್ಕ್ ಕಂಪ್ಲೀಟ್ ಮಾಡಲು ತಿಳಿಸಿದ್ದಾರೆ. ಪ್ರತಿ ಟಾಸ್ಕ್‌ಗೆ 70ರೂ. ಹಣವನ್ನು ಹಾಕುವುದಾಗಿ ತಿಳಿಸಿದ್ದಾರೆ. ಈ ರೀತಿ 2-3 ದಿನ ಆರೋಪಿಯು ಇನ್ನೊಂದು ಟಾಸ್ಕ್ ಅಂತ 2 ಸಾವಿರ ರೂ. ಪಾವತಿಸಿದರೆ ಶೇ. 20 ಲಾಭ ಕೊಡುತ್ತೇವೆ, ದೊಡ್ಡ ಮೊತ್ತ ಕಳುಹಿಸಿದರೆ ಇನ್ನೂ ಹೆಚ್ಚಿನ ಲಾಭ ಕೊಡುತ್ತೇವೆ ಎಂದು ನಂಬಿಸಿ 2400 ರೂ. ಹಣವನ್ನು ದೂರುದಾರರ ಖಾತೆಗೆ ವರ್ಗಾಯಿಸಿದ್ದಾರೆ. ಇದನ್ನು ನಂಬಿದ ದೂರುದಾರರು ಹಂತಹಂತವಾಗಿ 5,52,800 ೂ. ಪಾವತಿಸಿದ್ದಾರೆ. ಆದರೆ ಆ ಬಳಿಕ ನೆಲ್ಲಿಕಾರು ಅವರಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.