ಸೈಬರ್ ಅಪರಾಧ ತಡೆ ಜಾಗೃತಿ ಮಾಡಲಿ

18Ckd2
Published on

ಚಿಕ್ಕೋಡಿ: ಪ್ರತಿಯೊಬ್ಬರು ತಮ್ಮ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಉಚಿತ ಉಡುಗೊರೆ ಅಥವಾ ಬಹುಮಾನಗಳಂತ ಆಕರ್ಷಕ ಆಫರ್ ನಂಬಬೇಡಿ, ಇವು ನಿಮ್ಮನ್ನು ವಂಚಿಸುವ ಜಾಲಗಳಾಗಿವೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆ ಪಿಎಸ್‌ಐ ಬಸಗೌಡ ನೇರ್ಲಿ ಹೇಳಿದರು.

ಇಲ್ಲಿನ ಚೌಸನ್ ಶಿಕ್ಷಣ ವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೈಬರ್ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸೈಬರ್ ಅಪರಾಧದ ಬಗ್ಗೆ ತಿಳಿದುಕೊಂಡು ಕುಟುಂಬ ರಕ್ಷಣೆಗೆ ಮುಂದಾಗಬೇಕು ಎಂದರು. ಚೌಸನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಂದ್ರನಾಥ ಮಾತನಾಡಿ, ತಂತ್ರಜ್ಞಾನದ ದುರುಪಯೋಗದಿಂದ ಕಾನೂನು ಬಾಹಿರ ಅಪರಾಧಗಳು ಹೆಚ್ಚಾಗಿವೆ. ಸೈಬರ್ ಅಪರಾಧದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮುನ್ನಚರಿಕೆ ಅಗತ್ಯ ಎಂದು ತಿಳಿಸಿದರು.

ಪ್ರಾಧ್ಯಾಪಕ ಡಾ.ಎನ್.ಎಸ್.ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ.ತನುಜ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಚೌಸನ ನರ್ಸರಿ ಶಾಲೆ ನಿರ್ದೇಶಕ ಸವಿತಾ ಹೆಗಡೆ, ಸಂಸ್ಥೆಯ ಚೇರ್‌ಪರ್ಸನ್ ಶಕುಂತಲಾ ಚೌಗುಲೆ, ಕನಕಾಚಲ ಕನಕಗಿರಿ, ಸುಜಾತ ಚಂದಗಡೆ ಇತರರಿದ್ದರು. ಬನ್ನಪ್ಪ ಚೌಗುಲ ಸ್ವಾಗತಿಸಿದರು. ವೈಶಾಲಿ ಮಲನವರ ನಿರೂಪಿಸಿದರು. ರುಕಯ್ಯ ಮುಲ್ಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net