ಕೆವೈಸಿ ಹೆಸರಲ್ಲಿ 3.80 ಲಕ್ಷ ರೂ. ಗುಳುಂ; ವಾಟ್ಸ್ ಆ್ಯಪ್ ಲಿಂಕ್ ಕಳುಹಿಸಿ ವಂಚನೆ

cyber crime
Published on

ಹಾವೇರಿ: ನಿಮ್ಮ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್‌ನ ಇ ಕೆವೈಸಿ ಪರಿಶೀಲನೆ ಬಾಕಿ ಇದೆ. ಈ ಕೂಡಲೇ ಇ ಕೆವೈಸಿ ಮಾಡಿಸಲು ಈ ಲಿಂಕ್ ಒತ್ತಿ ಎಂದು ವ್ಯಕ್ತಿಯೊಬ್ಬರಿಗೆ ಸಂದೇಶ ಕಳುಹಿಸಿ, ಅವರಿಗೆ ಗೊತ್ತಾಗದಂತೆ ಅವರ ಖಾತೆಯಿಂದ 3,80,889 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ವರದಿಯಾಗಿದೆ.
ಬ್ಯಾಡಗಿ ಪಟ್ಟಣದ ಶಂಭುಲಿಂಗಪ್ಪ ಮಠದ ವಂಚನೆಗೀಡಾದವರು. ಫೆ.8ರಂದು ಅಪರಿಚಿತರೊಬ್ಬರು ವಾಟ್ಸ್ ಆ್ಯಪ್ ಮೂಲಕ ಸಂದೇಶ ರವಾನಿಸಿದ್ದರು. ನಿಮ್ಮ ಕೆವೈಸಿ ಪರಿಶೀಲನೆ ಮಾಡುವುದು ಬಾಕಿ ಇದೆ. 24 ಗಂಟೆಯೊಳಗೆ ಇಲ್ಲಿ ನೀಡಿರುವ ಕಸ್ಟಮರ್ ಕೇರ್ ಸಂಪರ್ಕಿಸಿ. ಇಲ್ಲದಿದ್ದರೆ ನಿಮ್ಮ ಸಿಮ್ ಕಾರ್ಡ್ ರದ್ದಾಗಲಿದೆ ಎಂದು ಸಂದೇಶ ರವಾನಿಸಿದ್ದರು.
ಇದನ್ನು ನಂಬಿದ ಶಂಭುಲಿಂಗಪ್ಪ ಆ ಸಂಖ್ಯ ಸಂಪರ್ಕಿಸಿದಾಗ, ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದಾರೆ. ಅದರಲ್ಲಿ ನೆಟ್ ಬ್ಯಾಂಕಿಂಗ್ ನಂಬರ್, ಪಾಸ್‌ವರ್ಡ ಹಾಕಿಸಿದ್ದಾರೆ. ನಂತರ ಅವರಿಗೆ ಗೊತ್ತಾಗದಂತೆ ಅವರ ಎಸ್‌ಬಿಐ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಈ ಕುರಿತು ಹಾವೇರಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net