ಪಾನಕಾರ್ಡ್ ಅಪಡೇಟ್ ಹೆಸರಿನಲ್ಲಿ ಹಾನಗಲ್ಲನ ಇಬ್ಬರಿಗೆ ವಂಚನೆ

Cibra
Published on

ಹಾನಗಲ್ಲ: ಬ್ಯಾಂಕ್ ಖಾತೆಗೆ ಪಾನಕಾರ್ಡ್ ಅಪಡೇಟ್ ಮಾಡುವ ಹೆಸರಿನಲ್ಲಿ ಪ್ರತ್ಯೇಕ ಎರಡು ಪ್ರಕರಣದಲ್ಲಿ ಇಬ್ಬರು ವ್ಯಕ್ತಿಯಿಂದ 60 ಸಾವಿರ ರೂ. ವರ್ಗಾವಣೆ ಮಾಡಿಕೊಂಡ ಕುರಿತು ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಪಟ್ಟಣದ ತುರಮಂದಿ ಓಣಿಯ ಮಂಜುನಾಥ ಬಸವರಾಜ ಶಿಬಸಣ್ಣನವರ (31) ಹಾಗೂ ತಾಲೂಕಿನ ದ್ಯಾಮನಕೊಪ್ಪ ಗ್ರಾಮದ ಶ್ರೀಕಾಂತ ಅಶೋಕ ಕುಮಚಗಿ (24) ಮೋಸ ಹೋದವರು.
ಶ್ರೀಕಾಂತ ಅವರ ಫೋನ್‌ಗೆ ಪಾನಕಾರ್ಡ್ ಅಪಡೇಟ್ ಕುರಿತು ವೆಬ್‌ಸೈಟ್ ಕಳುಹಿಸಿದ್ದು ಅವರು ಅದರ ಮೇಲೆ ಒತ್ತಿ ಪಾನಕಾರ್ಡ್ ನಂಬರ್ ಸೇರಿ ಇತರ ಮಾಹಿತಿ ನೀಡಿದ್ದಾರೆ. ಆಗ ಅವರ ಖಾತೆಯಿಂದ 49 ಸಾವಿರ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಮತ್ತೊಂದು ಪ್ರಕರಣದಲ್ಲಿ ಮಂಜುನಾಥ ಅವರ ಮೊಬೈಲ್‌ಗೆ ಮೇಸೆಜ್ ಬಂದಿದ್ದನ್ನು ಓಪನ್ ಮಾಡಿ ಬ್ಯಾಂಕ್ ಖಾತೆಯ ನಂಬರ್ ಹಾಗೂ ಪಾನಕಾರ್ಡ್ ನಮೂದಿಸಿದ್ದಾರೆ. ನಂತರ ಅವರ ಖಾತೆಯಿಂದ 11 ಸಾವಿರ ರೂ. ವರ್ಗಾವಣೆ ಮಾಡಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net