ಲಿಂಕ್​ ಕಳುಹಿಸಿ 1.98 ಲಕ್ಷ ರೂ. ಗುಳುಂ

Cyber Crime
Published on

ಹುಬ್ಬಳ್ಳಿ: "ಬ್ಯಾಂಕ್​ ಖಾತೆಗೆ ಪಾನ್​ ಕಾರ್ಡ್​ ಲಿಂಕ್​ ಮಾಡದಿದ್ದರೆ ಇಂದೇ ನಿಮ್ಮ ಖಾತೆ ಬ್ಲಾಕ್​ ಆಗಲಿದೆ' ಎಂದು ವ್ಯಕ್ತಿಯೊಬ್ಬರಿಗೆ ಸಂದೇಶದ ಮೂಲಕ ಲಿಂಕ್​ ಕಳುಹಿಸಿ, 1,98, 765 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವಿದ್ಯಾನಗರದ ಮರಿಶಾಂತವೀರೇಶ ಎಂಬುವರಿಗೆ ಅಪರಿಚಿತರು ಸಂದೇಶ ಕಳುಹಿಸಿದ್ದರು. ಬ್ಯಾಂಕ್​ನವರೇ ಇರಬಹುದು ಎಂದು ಲಿಂಕ್​ ಕ್ಲಿಕ್​ ಮಾಡಿ ಪಾನ್​ ಕಾರ್ಡ್​ ವಿವರ ಹಾಕಿ, ಒಟಿಪಿ ಸಬ್ಮಿಟ್​ ಮಾಡಿದ್ದರು. ಬಳಿಕ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net