

ಚಿಕ್ಕೋಡಿ: ತಂತ್ರಜ್ಞಾನ ಬೆಳೆದಂತೆ ಸೈಬರ್ ಕ್ರೈಂಗಳು ಹೆಚ್ಚುತ್ತಿರುವುದು ಕಳವಳಕಾರಿ. ಜಾಗರೂಕತೆಯಿಂದ ತಂತ್ರಜ್ಞಾನ ಬಳಸಿಕೊಳ್ಳಬೇಕು ಎಂದು ಲೋಕಾಯುಕ್ತ ಎಸ್ಪಿ ಹನಮಂತರಾಯ ಹೇಳಿದರು.
ಇಲ್ಲಿನ ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬೆಳಗಾವಿ ಲೋಕಾಯುಕ್ತ ಸಂಸ್ಥೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಹ ದಿನಾಚರಣೆಯಲ್ಲಿ ಮಾತನಾಡಿ, ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಪ್ರಾಚಾರ್ಯ ಡಾ.ಪ್ರಸಾದ ರಾಂಪುರೆ, ಅಶ್ವಿನಿ ಕಲಕೇರಿ ಮಾತನಾಡಿದರು. ಜಾಗೃತಿ ಅರಿವು ಸಪ್ತಾಹ ನಿಮಿತ್ತ ವಿದ್ಯಾರ್ಥಿಗಳಿಗಾಗಿ ‘ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಜವಾಬ್ದಾರಿಯುತ ನಾಗರಿಕರ ಪಾತ್ರ’ ಕುರಿತು ಏರ್ಪಡಿಸಿದ್ದ ನಿಬಂಧ ಸ್ಪರ್ಧೆಯಲ್ಲಿ ವಿನುತಾ ಪಾಟೀಲ ಪ್ರಥಮ, ಸಂಧ್ಯಾ ಕಾರತಗೆ ದ್ವಿತೀಯ, ಸಾಕ್ಷಿ ಅಂಗಡಿ ತೃತೀಯ ಸ್ಥಾನ ಹಾಗೂ ವೇದಿಕಾ ಬಾಳಿಕಾಯಿ ಸಮಾಧಾನಕರ ಬಹುಮಾನ ಪಡೆದರು.
ಶೈಕ್ಷಣಿಕ ಸಂಯೋಜಕ ಕುಮಾರ ಚೌಗಲಾ, ಪರೀಕ್ಷಾ ಸಂಯೋಜಕ ಸುನೀಲ ಹೆಬ್ಬಾಳೆ, ಡಾ.ಸಂಜಯ ಅಂಕಲಿ, ಡಾ.ಜಗನ್ನಾಥ ಜಾಧವ, ಡಾ.ಸಂಜಯ ಹನಗಂಡಿ, ಸಂಗೀತಾ ವಾಟೆಗಾಂವಕರ, ಡಾ.ಮಹಾಂತಯ್ಯ ಮಠಪತಿ, ಸುನೀಲ ಶಿಂಧೆ, ಪ್ರದೀಪ ಹೊದ್ಲೂರ, ಸಾಕ್ಷಿ ಅಂಗಡಿ, ಸಾನಿಕಾ ಕಾಮೇರಿ, ಡಾ.ಸಚಿನ ಮೆಕ್ಕಳಕಿ, ಅನಿತಾ ಬಿರಾಜ, ತೇಜಸ್ವಿನಿ ಜಮಖಂಡಿ, ಶ್ರೀರಕ್ಷಾ ತೆಲಸಿಂಗೆ, ಶಿವಾನಂದ ಬೆಂಡವಾಡೆ ಇತರರಿದ್ದರು.