ಡೆಬಿಟ್ ಕಾರ್ಡ್ ಮಾಹಿತಿ ಪಡೆದು 4.99 ಲಕ್ಷ ರೂ. ವಂಚನೆ

images (3)
Published on

ಉಡುಪಿ: ಎಸ್.ಬಿ.ಐ ಕ್ರೆಡಿಟ್ ಕಾರ್ಡನ್ನು ಆಕ್ಟೀವೇಶನ್ ಮಾಡುವುದಾಗಿ ಹೇಳಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಓಟಿಪಿ ಪಡೆದು 4.99 ಲಕ್ಷ ರೂ. ವಂಚಿಸಿದ್ದಾನೆ.

 ಅಬ್ದುಲ್ ಕರೀಮ್ ಎಂಬುವವರಿಗೆ ಕರೆ ಮಾಡಿದ ಅಪರಿಚಿತ ವ್ಯಕಿ ಮಣಿಪಾಲ ಶಾಖೆ ಎಸ್.ಬಿ ಖಾತೆ ಯಿಂದ ರೂ. 49,999 ರಂತೆ ಕ್ರಮಾವಾಗಿ 10 ಸಲ ಟ್ರಾನ್ಸ್ ಕ್ಷನ್ ಮಾಡಿ ಒಟ್ಟು ರೂ. 4,99,990 - ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿದ್ದಾನೆ.  ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net