

ಧಾರವಾಡ: ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತೇವೆ. ಆದರೆ, ಅವುಗಳ ಸದ್ಬಳಕೆಯಾದರೆ ಮಾತ್ರ ಬೆಲೆ ಇರುತ್ತದೆ. ವಯಸ್ಕರಲ್ಲದ ವಿದ್ಯಾರ್ಥಿಗಳು ಖಾಸಗಿ ೋಟೊಗಳು ಹಾಗೂ ವೈಯಕ್ತಿಕ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೇರಿಸಬಾರದು ಎಂದು ಉಪನಗರ ಠಾಣೆ ಪಿಎಸ್‌ಐ ಸಚಿನ್ ದಾಸರಡ್ಡಿ ಹೇಳಿದರು.
ನಗರದ ಎಂ.ಎನ್. ಪಾಟೀಲ ಎಜುಕೇಶನ್ ೌಂಡೇಶನ್ ಅಡಿಯಲ್ಲಿ ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಪರಿಚಿತರು ಕರೆ ಮಾಡಿದಾಗ ಒಟಿಪಿ ಅಥವಾ ಬೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದರು.
ಕಾಲೇಜಿನ ಪ್ರಾಚಾರ್ಯ ಶಿವಶಂಕರರಾವ್ ಮಾತನಾಡಿ, ಅಪರಾಧ ಘಟನೆಗಳು ಗಮನಕ್ಕೆ ಬಂದಾಗ ಪೋಲಿಸರಿಗೆ ಮಾಹಿತಿ ನೀಡಬೇಕು ಎಂದರು.
ಉಪ ಪ್ರಾಚಾರ್ಯೆ ನೇತ್ರಾವತಿ ಗಾಳಿಮಠ ಹಾಗೂ ಆಡಳಿತಾತ್ಮಕ ಪ್ರಾಚಾರ್ಯ ಕಾರ್ತಿಕ ಪಾಟೀಲ ಹಾಗೂ ಉಪನಗರ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.