ಅಪರಾಧ ತಡೆ ಮಾಸಾಚರಣೆ : ಸೈಬರ್ ಕ್ರೈಂ, ವಾಹನ ಚಾಲನೆ ಕುರಿತು ಜಾಗೃತಿ

New Project (33)
Published on

ಸುಳ್ಯ: ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸುಳ್ಯ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಕ್ರೈಂ ಜಾಗೃತಿ ಮತ್ತು ವಾಹನ ಚಾಲನೆ ಕುರಿತು ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು.

ಸೈಬರ್ ಕ್ರೈಂ ಜಾಗೃತಿ ಕುರಿತು ಎಎಸ್‌ಐ ಉದಯಕುಮಾರ್, ವಾಹನ ಚಾಲನೆ ಜಾಗೃತಿ ಕುರಿತು ಎಎಸ್‌ಐ ಸುರೇಶ್ ಮಾಹಿತಿ ನೀಡಿದರು. ಶಿಕ್ಷಕ ಶಿವಪ್ರಕಾಶ ಕುದ್ಪಾಜೆ ಇದ್ದರು. ಶಿಕ್ಷಕ ಕುಮಾರ್ ಲಮಾಣಿ ವಂದಿಸಿದರು. ಶಿಕ್ಷಕಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net