

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮಾಹಿತಿ ತಂತ್ರಜ್ಞಾನ ಬೆಳೆದಂತೆ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ, ಮಾಹಿತಿ ತಂತ್ರಜ್ಞಾನದಿಂದ ಎಷ್ಟು ಒಳಿತಾಗತ್ತಿದೆಯೇ ಅಷ್ಟೇ ಪ್ರಮಾಣದಲ್ಲಿ ದುರ್ಬಳಕೆಯಾಗುತ್ತಿದೆ, ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾಗದೆ ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಸಲಹೆ ನೀಡಿದರು.
ಮಾಹಿತಿ ತಂತ್ರಜ್ಞಾನ ಇಲಾಖೆಯ ಜಿಲ್ಲಾ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸುರಕ್ಷಿತ ಅಂತರ್ಜಾಲ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಬಳಕೆ ಜನಜೀವನದ ಅವಿಭಾಜ್ಯ ಅಂಗವಾಗಿದೆ, ದಿನನಿತ್ಯದ ಬಳಕೆಯಲ್ಲಿ ಅಪರಿಚಿತರು ನಮ್ಮ ಅಪ್ಲಿಕೇಶನ್‌ಗಳನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಾರೆ ಈ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು ಎಂದರು. ಮೊಬೈಲ್ ಇಂಟರ್‌ನೆಟ್ ಬಳಕೆದಾರರ ಹೆಸರು, ಪಾಸ್‌ವರ್ಡ್, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ ಮುಂತಾದ ನಮ್ಮ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುತ್ತಾ ಬರುತ್ತಿದ್ದಾರೆ ಈ ಬಗ್ಗೆ ಸಾರ್ವಜನಿಕರು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ ಎಂದರು.
ಅನಗತ್ಯ ಲಿಂಕ್ ಕ್ಲಿಕ್ ಮಾಡಬೇಡಿ: ಹಣ ದುಪ್ಪಟ್ಟು ಮಾಡಿಕೊಳ್ಳಬೇಕೆಂಬ ಆಸೆಯಿಂದ ಅನಗತ್ಯ ಲಿಂಕ್ ಕ್ಲಿಕ್ ಮಾಡಿ ಮೋಸದ ಜಾಲಕ್ಕೆ ತುತ್ತಾಗುವುದು ನಿಲ್ಲಬೇಕು, ಸಾರ್ವಜನಿಕ ಸ್ಥಳದಲ್ಲಿ ಸಿಗುವ ಉಚಿತ ವೈ-ಫೈ ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು. ಇಂದಿನ ದಿನಗಳಲ್ಲಿ ವಿವಿಧ ಬ್ಯಾಂಕ್, ಕಂಪನಿ, ಸರ್ಕಾರಿ ಚಿಹ್ನೆಯಿರುವ ಡಿಪಿಗಳ ಮೂಲಕ ವಂಚಕರು ವಂಚನೆಯ ಜಾಲ ಬೀಸುತ್ತಾರೆ, ಲಿಂಕ್‌ಗಳನ್ನು ಕಳುಹಿಸಿ ಇದನ್ನು ಕ್ಲಿಕ್ ಮಾಡಿದರೆ ಇಷ್ಟು ಹಣ ನಿಮ್ಮದಾಗುತ್ತದೆ, ನಿಮಗೆ ಬಹುಮಾನ ಬಂದಿದೆ ಹೀಗೆ ತರಹೇವಾರಿ ಸಂದೇಶಗಳನ್ನು ಕಳುಹಿಸುತ್ತಾರೆ, ಇಂಥ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಮೊಬೈಲ್ ಹ್ಯಾಕ್ ಆಗುತ್ತದೆ, ನಿಮ್ಮ ಖಾತೆಯಲ್ಲಿನ ಹಣ ಕ್ಷಣಾರ್ಧದಲ್ಲಿ ವಂಚಕರ ಖಾತೆಗೆ ವರ್ಗವಾಗುವ ಅಪಾಯವಿರುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವ ವೈ-ೈ ಸಂಪರ್ಕದಲ್ಲೂ ಸೈಬರ್ ಅಪರಾಧಿಗಳು ತಮ್ಮ ಜಾಲ ಬೀಸುತ್ತಾರೆ ಇವೆಲ್ಲವುಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಬಿ.ಎ.ಬಸವರಾಜು ಮುನ್ನೆಚ್ಚರಿಕೆ ನೀಡಿದರು. ವೈಯಕ್ತಿಕ ಮಾಹಿತಿ ಮತ್ತು ಹಣಕ್ಕಾಗಿ ವಿನಂತಿಸುವ ಅಪರಿಚಿತ ಕರೆಗಳಿಗೆ, ಅಸುರಕ್ಷಿತ ವೆಬ್‌ಸೈಟ್ ಲಿಂಕ್‌ಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ ಈ ರೀತಿ ವಂಚನೆ ಕಂಡುಬಂದರೆ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಬೇಕು ಎಂದು ಸಲಹೆ ನೀಡಿದರು.
ಬಹಿರಂಗ ಪಡಿಸಬೇಡಿ: ಅಪರ ಜಿಲ್ಲಾಧಿಕಾರಿ ಎಚ್.ಅಮರೇಶ್ ಮಾತನಾಡಿ, ಸೈಬರ್ ವಂಚಕರು ವಿವಿಧ ರೀತಿ ತಂತ್ರಗಳನ್ನು ಬಳಸಿ ಸಾರ್ವಜನಿಕರ ವಂಚನೆ ಮಾಡುತ್ತಿದ್ದಾರೆ. ಈ ಮೂಲಕ ಇತ್ತೀಚಿನ ದಿನಗಳಲ್ಲಿ ಜನರ ನಿದ್ದೆಗೆಡಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಿಮ್ಮಿಂದಲೇ ಒಟಿಪಿ ಪಾಸ್ವರ್ಡ್ ಪಡೆದು ನಿಮಗೆ ವಂಚಿಸುತ್ತಿದ್ದಾರೆ ಹಾಗಾಗಿ ಒಟಿಪಿ, ಆಧಾರ್‌ಸಂಖ್ಯೆ, ಪಾನ್ ಸಂಖ್ಯೆ ಅಥವಾ ಬ್ಯಾಂಕ್ ರುಜುವಾತುಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಅಥವಾ ಯಾರೊಂದಿಗೂ ಬಹಿರಂಗ ಪಡಿಸಬೇಡಿ ಎಂದು ಎಚ್ಚರಿಕೆ ನೀಡಿದರು. ಇತ್ತೀಚಿನ ದಿನಗಳಲ್ಲಿ ವಾಟ್ಸ್ಾ ಗ್ರೂಪ್‌ಗಳಲ್ಲಿ ಎ್ಪಿಕೆ ೈಲ್‌ಗಳನ್ನು ಕಳುಹಿಸುವ ಖದೀಮರು ೈಲ್ ಓಪನ್ ಮಾಡಿದರೆ ಹ್ಯಾಕ್ ಮಾಡುವ ತಂತ್ರಗಾರಿಕೆ ಮಾಡುತ್ತಿದ್ದಾರೆ, ವಾಟ್ಸ್ಾ ಗ್ರೂಪ್‌ನಲ್ಲಿ ನಿಮ್ಮದೆ ಪರಿಚಿತರ, ಸ್ನೇಹಿತರ ಮೊಬೈಲ್ ಸಂಖ್ಯೆಗಳಿಂದ ೈಲ್ ಕಳುಹಿಸುವ ಅಪಾಯವಿದೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕು, ನಿಮಗೆ ಸೈಬರ್ ವಂಚನೆಯಾದ ಸಂದರ್ಭದಲ್ಲಿ ಸೈಬರ್ ಕ್ರೈಂ ಪೊಲೀಸ್ ಸಂಖ್ಯೆ1930 ಕರೆಮಾಡಿ ದೂರು ದಾಖಲಿಸಬಹುದು ಎಂದರು.
---------