ಸೈಬರ್ ಕ್ರಿಮಿನಲ್‌ಗಳಿಂದ ವಂಚನೆ ಜಾಲ

cy
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಡಿಯಲ್ ವ್ಯಾಲ್ಯುಯಬಲ್ ಕಸ್ಟಮರ್..ಎಂದು ಪ್ರಾರಂಭವಾಗುವ ಎಫಿಕ್ ೈಲ್‌ವೊಂದು ಶನಿವಾರ ಜಿಲ್ಲೆಯಲ್ಲಿನ ಹಲವರ ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಿದೆ. ಈ ಮೂಲಕ ಸೈಬರ್ ಖದೀಮರು ವಾಟ್ಸಾಪ್ ಗ್ರೂಪ್‌ನಲ್ಲಿರುವ ಸದಸ್ಯರ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಹುನ್ನಾರ ನಡೆಸಿದ್ದಾರೆ. ಇದು ಜಿಲ್ಲೆಯಲ್ಲಿ ಹೆಚ್ಚು ಸದ್ದು ಮಾಡಿದ್ದು ಹಲವು ಪೊಲೀಸರಿಗೆ ಕರೆ ಮಾಡಿ ಈ ಬಗ್ಗೆ ದೂರು ನೀಡಿದ್ದಾರೆ.

ವ್ಯಕ್ತಿಯೊಬ್ಬರ ಸಂಖ್ಯೆಯಿಂದ ಸಂದೇಶ: ಯುಸಿಒ ಮೊಬೈಲ್ ಬ್ಯಾಂಕಿಂಗೆ ರಿವಾರ್ಡ್ಸ್ ಬಂದಿದ್ದು, ಇದನ್ನು ಕ್ಲೈಮ್ ಮಾಡಿಕೊಳ್ಳಿ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂಬ ಸಂದೇಶ ಹರಿದಾಡಿದೆ. ಕೆಳಗೊಂದು ಎಪಿಕೆ ೈಲ್ ಕಳುಹಿಸಲಾಗಿದೆ. ಇದು ಮುಖ್ಯವಾಗಿ ಜಿಲ್ಲೆಯ ಪೊಲೀಸ್ ಹಾಗೂ ಮಾಧ್ಯಮದವರ ವಾಟ್ಸಾಪ್ ಗ್ರೂಪ್ ಸೇರಿ ಹಲವು ಸಂಘಟನೆ, ಸಂಸ್ಥೆಗಳ ಗ್ರೂಪ್‌ಗಳಲ್ಲಿ ಕಾಣಿಸಿಕೊಂಡಿದೆ. ವ್ಯಕ್ತಿಯೊಬ್ಬರ ಮೊಬೈಲ್ ಸಂಖ್ಯೆ ಹ್ಯಾಕ್ ಮಾಡಿ ಆ ವ್ಯಕ್ತಿ ಇರುವ ಪ್ರತಿ ಗ್ರೂಪ್‌ಗಳಲ್ಲೂ ಅವರದೇ ಸಂಖ್ಯೆಯಿಂದ ಪೋಸ್ಟ್ ಮಾಡಲಾಗಿದೆ.

ಓಪನ್ ಮಾಡಿದರೆ ಹ್ಯಾಕ್: ಈ ರೀತಿಯ ಪೋಸ್ಟ್ ನಂತರದಲ್ಲಿ ಕಳುಹಿಸಿರುವ ಎಪಿಕೆ ೈಲ್ ಓಪನ್ ಮಾಡಿದರೆ ಕೆಲವು ಸೆಕೆಂಡ್‌ನಲ್ಲಿ ಮೊಬೈಲ್ ಹ್ಯಾಕ್ ಆಗಲಿದೆ. ನಂತರದಲ್ಲಿ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲಿದೆ. ವಾಟ್ಸಾಪ್ ಗ್ರೂಪ್‌ನ ಡಿಪಿ ಬದಲಾಗಿರುವುದು ಗಮನಿಸಬೇಕು, ವಿಚಾರ ಮಾಡದೆ ಯಾವುದೇ ಕಾರಣಕ್ಕೂ ಎಪಿಕೆ ೈಲ್ ಓನ್ ಮಾಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ರಿಸೆಟ್ ಮಾಡಬೇಕು: ಯಾರಾದರೂ ಎಪಿಕೆ ೈಲ್ ಓನ್ ಮಾಡಿದರೆ ತಕ್ಷಣವೇ ಸೈಬರ್ ಠಾಣೆಗೆ ದೂರು ನೀಡಬೇಕು ಅಥವಾ ಪೊಲೀಸ್ ಸಹಾಯವಾಗಿ 1930 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಂತರದಲ್ಲಿ ಮೊಬೈಲ್ ರೀಸೆಟ್ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳ ಕೈಗೆ ಪೋನ್ ಕೊಟ್ಟಾಗ ಎಚ್ಚರಿಕೆ: ಸಾಮಾನ್ಯವಾಗಿ ಮನೆಗಳಲ್ಲಿ ದೊಡ್ಡವರ ಮೊಬೈಲ್‌ಪೋನ್‌ಗಳನ್ನು ಮಕ್ಕಳು ಬಳಸುತ್ತಿರುತ್ತಾರೆ ಸಾಕಷ್ಟು ಮನೆಗಳಲ್ಲಿ ಮಕ್ಕಳು ಗೇಮ್ ಆಡುವ ಕಾರಣಕ್ಕಾಗಿ ಪಾಲಕರ ಮೊಬೈಲ್ ಬಳಸುವುದು ಸಹಜ. ಈ ವೇಳೆ ಇಂಥ ಸಂದೇಶಗಳನ್ನು ಓಪನ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಈ ಬಗ್ಗೆ ಮಕ್ಕಳಿಗೆ ಪಾಲಕರು ತಿಳುವಳಿಕೆ ಹೇಳಬೇಕು. ಮುಖ್ಯವಾಗಿ ಮಕ್ಕಳಿಗೆ ಮೊಬೈಲ್ ಪೋನ್ ಕೊಡುವುದನ್ನೇ ತಪ್ಪಿಸುವುದು ಒಳಿತು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಎಲ್ಲ ಕಡೆಗಳಲ್ಲೂ ಸೈಬರ್ ಖದೀಮರು ಕೈಚಳ ತೋರಿಸುತ್ತಿದ್ದಾರೆ. ಅನೇಕ ವಂಚನೆ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಮುಖ್ಯವಾಗಿ ಮೊಬೈಲ್‌ಗಳ ಮೂಲಕ ಹೆಚ್ಚು ಸಕ್ರಿಯರಾಗಿರುತ್ತಾರೆ. ಆದ್ದರಿಂದ ಜನರು ಜಾಗೃತರಾಗಬೇಕು ಯಾವುದೇ ಇಂಥ ಸಂದೇಶಗಳು ಬಂದರೆ ತಕ್ಷಣ ಅದನ್ನು ಪರೀಕ್ಷಿಸಲು ಹೋಗಬಾರದು, ಇಂಥ ಎಪಿಕೆ ೈಲ್‌ಗಳ ಮೂಲಕ ಮೊಬೈಲ್ ಹ್ಯಾಕ್ ಮಾಡಿ ಬ್ಯಾಂಕ್ ಖಾತೆಯನ್ನು ಲಪಟಾಯಿಸುತ್ತಾರೆ. ಇಂಥ ಸಂದೇಶಗಳು ಬಂದರೆ ವಂಚನೆಗೊಳಗಾದರೆ ತಕ್ಷಣ ಸೈಬರ್ ಪೊಲೀಸರಿಗೆ ಅಥವಾ ಸಹಾಯವಾಣಿ 1930ಗೆ ಕರೆ ಮಾಡಿ ದೂರು ನೀಡಬೇಕು.

ಸಂತೋಷ್, ಇನ್ಸ್‌ಪೆಕ್ಟರ್ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net