ದೇಶಕ್ಕೆ ಸಿ.ವಿ.ರಾಮನ್ ಕೊಡುಗೆ ಅಪಾರ

28-kkr.1(2-24
ಕಿಕ್ಕೇರಿಯಲ್ಲಿ ಸ್ಪಂದನಾ ಫೌಂಡೇಷನ್ ವತಿಯಿಂದ ಬುಧವಾರ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ತ್ರಿವೇಣಿ, ಕವಿತಾ, ಶಾರದಾ ಹಾಜರಿದ್ದರು.
Published on

ಕಿಕ್ಕೇರಿ: ದೇಶದ ಕೀರ್ತಿಯನ್ನು ವಿಶ್ವದಾದ್ಯಂತ ಪಸರಿಸಿದವರು ಸಿ.ವಿ.ರಾಮನ್ ಎಂದು ಸ್ಪಂದನಾ ಫೌಂಡೇಷನ್ ಟ್ರಸ್ಟಿ ತ್ರಿವೇಣಿ ತಿಳಿಸಿದರು.

ಸ್ಪಂದನಾ ಫೌಂಡೇಷನ್ ವತಿಯಿಂದ ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿ ಜನಿಸಿದ ರಾಮನ್, ಬಾಲ್ಯದಿಂದಲೂ ಹೊಸ ಹೊಸ ವಿಷಯ ತಿಳಿಯುವ, ಅನ್ವೇಷಣೆ ಮಾಡುವ ಕೌತುಕ ಹೊಂದಿದ್ದರು. ರಾಜ್ಯದಲ್ಲಿ ಇಂಡಿಯನ್ ರಾಮನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಶೋಧನಾ ಕೇಂದ್ರ ಸ್ಥಾಪನೆಗೆ ಇವರ ಕೊಡುಗೆ ಅಪಾರ ಎಂದರು.

ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತಿತರ ವಿಷಯಗಳಲ್ಲಿ ಯುವಕರು ಅವಿಷ್ಕಾರ ಮಾಡಲು, ಜನಸಾಮಾನ್ಯರಲ್ಲಿ ವೈಜ್ಞಾನಿಕ ಭಾವನೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ಮಕ್ಕಳಲ್ಲಿ ಇಂತಹ ಭಾವನೆಗಳು ಮೂಡಲು ಪಾಲಕರು ಉತ್ತಮ ಪರಿಸರ ನಿರ್ಮಿಸಬೇಕು. ಜತೆಗೆ ಮೊಬೈಲ್‌ನಿಂದ ದೂರವಿದ್ದು, ಮಕ್ಕಳಿಗೆ ತಂತ್ರಜ್ಞಾನದತ್ತ ಮುಖ ಮಾಡಲು ಕಾಳಜಿ ವಹಿಸಬೇಕು ಎಂದು ಹೇಳಿದರು.

ಹಲವು ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ಮಕ್ಕಳು ರಚಿಸಿದರು. ಗಿಡಕ್ಕೆ ನೀರೆರೆದು ಪರಿಸರ ಕಾಳಜಿ ಮೆರೆದರು. ಸಾಮಾಜಿಕ ಸೇವಾಕರ್ತೆ ಕವಿತಾ, ಶಾರದಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net