ವಿದ್ಯುತ್ ಪೂರೈಕೆ ವ್ಯತ್ಯಯ

POWER CUT NEW
Published on

ಹುಬ್ಬಳ್ಳಿ : ಇಲ್ಲಿನ ಉಣಕಲ್ಲನ ವಿದ್ಯುತ್ ಉಪ ಕೇಂದ್ರ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಫೆ. 16ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಉಣಕಲ್, ಶಿರೂರ ಪಾರ್ಕ್, ಪ್ರಭಾತ ಕಾಲನಿ, ಜೈನಗರ, ಪ್ರಗತಿ ಕಾಲನಿ, ತಿಮ್ಮಸಾಗರ ದೇವಸ್ಥಾನ, ಆರ್.ಬಿ. ಪಾಟೀಲ ಆಸ್ಪತ್ರೆ, ಜಿ.ಜೆ. ಕಾಮರ್ಸ್ ಕಾಲೇಜ್, ಹೊಸೂರ, ಲಿಂಗರಾಜ ನಗರ ಉತ್ತರ ಮತ್ತು ದಕ್ಷಿಣ, ಬಿವಿಬಿ ಕಾಲೇಜ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net