ಸಾಮೂಹಿಕ ಮದುವೆಯಿಂದ ದುಂದುವೆಚ್ಚಕ್ಕೆ ಕಡಿವಾಣ

h18-kshamata
Published on

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಹಾಗೂ ಕರ್ನಾಟಕದ ಹುಬ್ಬಳ್ಳಿ ನವಯುಗ ಸಂಘಟನೆ ಆಶ್ರಯದಲ್ಲಿ ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನ ಸಂತೆ ಮೈದಾನದಲ್ಲಿ ಭಾನುವಾರ ಸಾಮೂಹಿಕ ವಿವಾಹ ಹಾಗೂ ಉಪನಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಸಾಮೂಹಿಕ ಮದುವೆಗಳಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. 8 ವಟುಗಳಿಗೆ ಉಪನಯನ, 31 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸಂಘಟನೆ ಅಧ್ಯಕ್ಷ ಕೃಷ್ಣ ಗಂಡಗಾಳೇಕರ, ಸುಭಾಷ ಸಿಂಗ್ ಜಮಾದಾರ, ಆನಂದ ಗುರುಸ್ವಾಮಿ, ರಮೇಶ ಮಹಾದೇವಪ್ಪನವರ, ಸಿದ್ದು ಮೊಗಲಿಶೆಟ್ಟರ್, ರವಿ ನಾಯಕ, ಸುಬ್ರಹ್ಮಣ್ಯ ಶಿರಕೋಳ, ಪ್ರಭು ನವಲಗುಂದಮಠ, ರಾಜು ಜರತಾರಘರ, ಸಿದ್ದೇಶ ಕಬಾಡದ, ಶೇಖಪ್ಪ ಬೆಳಗಲಿ, ಕೃಷ್ಣ ಉಪ್ಪೇರ, ಸುಭಾಷ ಅಕ್ಕಲಕೋಟೆ, ಅವಿನಾಶ ಹರಿವಾಣ, ಮಧು ನವಲೆ, ಶಿವಾನಂದ ಗಚ್ಚೇನರವರ, ಸಂಗೀತಾ ಬದ್ದಿ, ಲೀಲಾವತಿ ಪಾಸ್ತೆ, ಸೀಮಾ ಲದ್ವಾ, ರೇಖಾ ಸರ್ಜನ್, ಮಧು ಪಟ್ಟಣಶೆಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net