ಅಕ್ರಮ ಸಾಗಾಟದ 45.92 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ

mng--3 March gold
Published on


ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ 45,92,700 ರೂ. ಮೌಲ್ಯದ 24 ಕ್ಯಾರೆಟ್‌ನ 729 ಗ್ರಾಂ ತೂಕದ ಚಿನ್ನವನ್ನು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


ಅಬುಧಾಬಿಯಿಂದ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆಗಮಿಸುತ್ತಿದ್ದ ಕಾಸರಗೋಡಿನ ನಿವಾಸಿಯೋರ್ವನನ್ನು ತಪಾಸಣೆಗೊಳಪಡಿಸಿದಾಗ ಆತ ಪೇಸ್ಟ್ ರೂಪದ ಚಿನ್ನವನ್ನು ಅಂಡಾಕಾರದ 3 ಕವರ್‌ಗಳ ಒಳಗಿಟ್ಟು ಅದನ್ನು ಗುದನಾಳದಲ್ಲಿ ಬಚ್ಚಿಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net