

ಕೊಪ್ಪಳ: ಗ್ರಾಹಕರು ಹಾಗೂ ಸದಸ್ಯರ ಸಹಕಾರದಿಂದ ನಮ್ಮ ಬ್ಯಾಂಕ್ ಪ್ರಗತಿ ಸಾಧಿಸುತ್ತಿದೆ ಎಂದು ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಆಡೂರು ಹೇಳಿದರು.
ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕಿನ್ 90ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಾಕಷ್ಟು ಪೈಪೋಟಿ ಹಾಗೂ ಹಲವಾರು ಸವಾಲುಗಳ ನಡುವೆಯೂ ಗ್ರಾಹಕರ ಬೆಂಬಲದಿಂದ ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿದೆ. ಅಲ್ಲದೇ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸ ಹೆಚ್ಚಿಕೊಂಡು, ಉತ್ತಮ ಸೇವೆ ನೀಡುತ್ತಿದೆ ಎಂದರು.
ಬ್ಯಾಂಕ್‌ನ ಸದಸ್ಯರ ಸಂಖ್ಯೆ 3,752 ಇದ್ದು, ಷೇರು ಬಂಡವಾಳ 227.13 ಲಕ್ಷ ರೂ. ಇದೆ. ಪ್ರಸಕ್ತ ಸಾಲಿನಲ್ಲಿ 365 ಜನ ಸದಸ್ಯರು ಸೇರ್ಪಡೆಯಾಗಿ, 60 ಜನ ಸದಸ್ಯರು ನಿರ್ಗಮಿಸಿದ್ದಾರೆ. ಶೇರು ಬಂಡವಾಳ 48.56 ಲಕ್ಷ ರೂ. ಜಮಾ ಇದ್ದು, 25.53ಲಕ್ಷ ರೂ. ಶೇರು ಬಂಡವಾಳ ಮರುಪಾವತಿಯಾಗಿದೆ ಎಂದರು.
ಇಸ್ರೋ ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ವಿಜ್ಞಾನಿಗಳಿಗೆ ಚಪ್ಪಾಳೆಯ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ಸುಮಂಗಲಾ ಸೋಮಲಾಪುರ, ಸೈಯ್ಯದ್ ಶೈನಜಾಬೇಗಂ, ಜಯಶ್ರೀ ಬಬಲಿ, ಬಸವರಾಜ ಶಹಪೂರ, ಗವಿಸಿದ್ದಪ್ಪ ತಳಕಲ್, ವೃತ್ತಿಪರ ನಿರ್ದೇಶಕ ವಿ.ಬಿ.ಅಂಗಡಿ ಇತರರಿದ್ದರು.