

ಹುಕ್ಕೇರಿ: ಸದಸ್ಯರು, ಠೇವುದಾರರ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲದಿಂದ ಬೆಲ್ಲದ ಬಾಗೇವಾಡಿ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಜಿಲ್ಲೆಯಾದ್ಯಂತ ಹೆಸರಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ಯಾಂಕ್‌ನ 80ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2024ರ ಮಾರ್ಚ್ ಅಂತ್ಯಕ್ಕೆ 488.9 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ 435.65 ಕೋಟಿ ರೂ. ಠೇವು ಸಂಗ್ರಹಿಸಿ, 233.98 ಕೋಟಿ ರೂ. ಸಾಲ ವಿತರಿಸಿದೆ. ಬ್ಯಾಂಕ್ 2.50 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು. ಈಗಾಗಲೇ 27 ಶಾಖೆ ಇರುವ ಬ್ಯಾಂಕ್ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಶಾಖೆ ತೆರೆಯುವ ಚಿಂತನೆ ಹೊಂದಿದೆ ಎಂದರು.
ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ರೈತರ ಆರ್ಥಿಕ ಸದೃಢತೆಗೆ ಬ್ಯಾಂಕ್ ಶ್ರಮಿಸಬೇಕು. ಬ್ಯಾಂಕ್‌ನಿಂದ ನೀಡುವ ಸಾಲ ಸೌಲಭ್ಯಗಳ ಅರಿವು ಮೂಡಿಸುವ ಕಾರ್ಯ ಅಗಬೇಕು. ಮುಂಬರುವ 4 ವರ್ಷಗಳಲ್ಲಿ ಬ್ಯಾಂಕ್‌ನ ದುಡಿಯುವ ಬಂಡವಾಳ 1,000 ಕೋಟಿ ರೂ. ಆಗಬೇಕು ಎಂದರು.
ಆಡಳಿತ ಸಲಹೆಗಾರ ಎಂ.ಕೆ.ಅಮ್ಮಣಗಿ ವರದಿ ಮಂಡಿಸಿದರು. ನಿವೃತ್ತ ಉಪನ್ಯಾಸಕ ಚಂದ್ರಶೇಖರ ಗುಡಸಿ, ಪಿ.ಜಿ.ಕೊಣ್ಣೂರ, ಬ್ಯಾಂಕ್ ನಿರ್ದೇಶಕ ವಿನಾಯಕ ಬುರ್ಜಿ, ಉಪಾಧ್ಯಕ್ಷ ಆರ್.ಬಿ.ಮುನ್ನೋಳಿ, ನಿರ್ದೇಶಕರಾದ ಎಂ.ಎಸ್.ಬೆಲ್ಲದ, ಎಂ.ಪಿ.ಖೇಮಲಾಪುರೆ, ಎಸ್.ವಿ.ಹಾಗರಗಿ, ಸುರೇಶ ಬೆಲ್ಲದ, ಮುರುಗೇಶ ಕತ್ತಿ, ಎಸ್.ಡಿ.ಪಠಾಣ, ಕಿಶೋರ ಕತ್ತಿ, ಎಂ.ಎಸ್.ಶ್ರೀಖಂಡೆ, ವಿ.ಎಸ್.ಶೆಟ್ಟಿ, ಎಸ್.ಎಸ್.ತೇರದಾಳ, ಹಿರಿಯರಾದ ಅಪ್ಪಯ್ಯಪ್ಪ ಬಡಕುಂದ್ರಿ, ಸಂದೀಪ ಕತ್ತಿ, ಅಶೋಕ ಬೆಲ್ಲದ, ಶ್ರೀಕಾಂತ ಖೇಮಲಾಪುರೆ, ಪಾರೇಶ ಖೇಮಲಾಪುರೆ ಇತರರು ಇದ್ದರು.
ಹಿರಿಯ ವ್ಯವಸ್ಥಾಪಕ ಶ್ರೀಶೈಲ ಚರಾಟಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಸುನೀಲ ಬೆಲ್ಲದ ನಿರೂಪಿಸಿದರು. ನಿರ್ದೇಶಕ ಮುರಗೇಶ ಕತ್ತಿ ವಂದಿಸಿದರು.