ಗ್ರಾಹಕರು ಉದ್ರಿ ಹಣ ಕೊಡಲಿಲ್ಲವೆಂದು ನೇಣು ಬಿಗಿದುಕೊಂಡ ವ್ಯಾಪಾರಿ

Boy Suside+1
Published on

ಸವಣೂರ: ಕಿರಾಣಿ ಅಂಗಡಿಯಲ್ಲಿ ಗ್ರಾಹಕರಿಗೆ ನೀಡಿದ ಸಾಮಗ್ರಿಗಳ ಉದ್ರಿ ಹಣ ವಸೂಲಿ ಆಗಲಿಲ್ಲವೆಂದು ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ರಾಮದೇವರ ಗುಡಿ ಓಣಿಯಲ್ಲಿ ಮಂಗಳವಾರ ನಡೆದಿದೆ.
ಶಂಕರ ಚಂದ್ರಪ್ಪ ಗೌಡಣ್ಣನವರ (33) ಮೃತ ವ್ಯಾಪಾರಿ.
ಇವರು ಪಟ್ಟಣದಲ್ಲಿ ಮಂಜುನಾಥ ಕಿರಾಣಿ ಸ್ಟೋರ್ಸ್‌ ಇಟ್ಟುಕೊಂಡಿದ್ದರು. ಗ್ರಾಹಕರಿಗೆ 20ರಿಂದ 25 ಲಕ್ಷ ರೂ.ಗಳಷ್ಟು ಉದ್ರಿಯಾಗಿ ಸಾಮಗ್ರಿಗಳನ್ನು ಕೊಟ್ಟಿದ್ದರು. ಆದರೆ, ಯಾರೂ ಹಣ ವಾಪಸ್ ಕೊಡಲಿಲ್ಲ ಎಂದು ಮಾನಸಿಕ ಮಾಡಿಕೊಂಡು ಅಂಗಡಿಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net