ಗ್ರಾಹಕರ ಸಹಕಾರದಿಂದ ಸೊಸೈಟಿ ಬೆಳವಣಿಗೆ

web4
ಯಕ್ಸಂಬಾದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯ 10ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಸದಾನಂದ ಹಿರೇಮಠ, ಶಿವಗೌಡಾ ಬಾವಚೆ, ಮಹಾದೇವ ಪೋಳ ಇತರರು ಇದ್ದರು.
Published on

ಚಿಕ್ಕೋಡಿ ಗ್ರಾಮೀಣ: ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಸೇವೆ, ಜೀವ ವಿಮೆ ಹಾಗೂ ವಾಹನ ವಿಮೆ ಒದಗಿಸುವ ಮೂಲಕ ಯಕ್ಸಂಬಾದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದು ಯಕ್ಸಂಬಾ ಶಾಖೆಯ ಸಲಹಾ ಸಮಿತಿ ಸದಸ್ಯ ಸದಾನಂದ ಹಿರೇಮಠ ಹೇಳಿದರು.

ಸಮೀಪದ ಯಕ್ಸಂಬಾದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 10ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಸೊಸೈಟಿ ಬೆಳವಣಿಗೆಗೆ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರ ಕಾರಣ ಎಂದರು.

ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಶಿವಗೌಡ ಬಾವಚೆ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಸಲಹಾ ಸಮಿತಿ ಸದಸ್ಯ ಮಹಾದೇವ ಪೋಳ, ಅಮೋಲ ಶಹಾ, ಮಾರುತಿ ಖೋತ, ರಾಮಚಂದ್ರ ಬಾಕಳೆ, ರಾಘವೇಂದ್ರಸಿಂಗ ರಜಪೂತ, ಚಿದಾನಂದ ಸಾತ್ವಾರ, ಸಂಜಯ ಇಂಗಳೆ, ಮಹಾದೇವ ರೇಂದಾಳೆ, ಕೃಷ್ಣ ಕೋಕಣೆ, ಶಾಖಾ ವ್ಯವಸ್ಥಾಪಕ ಸುನೀಲ ಸಾವಳವಾಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net