

ವಿಜಯವಾಣಿ ಸುದ್ದಿಜಾಲ ಮಂಗಳೂರು
ದೇಶದ ಬೃಹತ್ ಬಂದರುಗಳ ಸಾಮರ್ಥ್ಯ ವೃದ್ಧಿ ಕೆಲಸ ಆದ್ಯತೆಯಲ್ಲಿ ಆಗುತ್ತಿದೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ ಬೇರೆ ದೇಶಗಳಿಗಿಂತ ವೇಗವಾಗಿ ಭಾರತದ ಮೆರಿಟೈಮ್ ಸಾಮರ್ಥ್ಯ ಏರಿಕೆಯಾಗುತ್ತಿದೆ. ಬಂದರು ಸಚಿವಾಲಯವು ಇದಕ್ಕೆ ಪೂರಕವಾಗಿದೆ ಎಂದು ಕೇಂದ್ರದ ಬಂದರು, ಪ್ರವಾಸೋದ್ಯಮ, ಒಳನಾಡು ಜಲಸಾರಿಗೆ ಖಾತೆ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಹೇಳಿದರು.
ನದೆಹಲಿಯ ಪ್ರಗತಿ ಮೈದಾನದಲ್ಲಿ ಅಕ್ಟೋಬರ್ 17_ರಿಂದ 19 ತನಕ ನಡೆಯುವ ಜಾಗತಿಕ ಮೆರಿಟೈಮ್ ಇಂಡಿಯ ಸಮ್ಮಿತ್ 2023 ಶೃಂಗಸಭೆಯ ಭಾಗವಾಗಿ ಪಣಂಬೂರು ಎನ್‌ಎಂಪಿಎ ಸಭಾಂಗಣದಲ್ಲಿ ಭಾನುವಾರ ಜರುಗಿದ ಕರ್ಟನ್ ರೈಸರ್ (ಸಮಾವೇಶ ಪೂರ್ವ) ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮೆರಿಟೈಮ್ ಉತ್ಕೃಷ್ಟತೆಯ ಹೊಸ ಯುಗದತ್ತ ಸಾಗುತ್ತಿದ್ದು, ಗ್ಲೋಬಲ್ ಮೇರಿಟೈಮ್ ಇಂಡಿಯಾ ಶೃಂಗಸಭೆ 2023 ಭಾರತದ ಕಡಲ ಉದ್ಯಮವನ್ನು ಅಭೂತಪೂರ್ವ ಎತ್ತರಕ್ಕೆ ನಾವೀನ್ಯತೆ, ಸಹಯೋಗ ಮತ್ತು ಉನ್ನತಿಗೆ ಏರಿಸುವ ದೇಶದ ಸಂಕಲ್ಪವನ್ನು ಸಾಕಾರಗೊಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನವಮಂಗಳೂರು ಬಂದರು ಪ್ರಾಧಿಕಾರ ಅಧ್ಯಕ್ಷ ಡಾ.ಎ.ವಿ.ರಮಣ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ ಸಿಎಲ್, ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎ.ರಾಘವೇಂದ್ರ ರಾವ್ ಉಪಸ್ಥಿತರಿದ್ದರು.