

ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನವರತನ್ ಜ್ಯುವೆಲರ್ಸ್ ಪ್ರೖೆ.ಲಿ. ಆಯೋಜಿಸಿದ್ದ ಮೂರು ದಿನಗಳ ‘ದಿ ಪ್ರಿನ್ಸೆಸ್ ಫ್ಯಾಷನ್ ಶೋ’ ಗೆ ಭಾನುವಾರ ತೆರೆಬಿದ್ದಿದೆ.
ಯುವ ರೂಪದರ್ಶಿಗಳಿಗೆ ಅವಕಾಶ ಕಲ್ಪಿಸಿ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಫ್ಯಾಷನ್ ಶೋನಲ್ಲಿ ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಉಡುಪು ಧರಿಸಿ ರೂಪದರ್ಶಿಗಳು ಆಭರಣಗಳನ್ನು ತೊಟ್ಟು ರ‍್ಯಾಂಪ್ ವಾಕ್ ಮಾಡಿದರು. ಮುಖ್ಯ ಅತಿಥಿಯಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಭಾಗವಹಿಸಿದ್ದರು. ಭಾನುವಾರ ವೈದ್ಯದಿನವೂ ಆಗಿದ್ದರಿಂದ ವೈದ್ಯರಾದ ಡಾ. ಚಂದ್ರಮೌಳಿ, ಡಾ. ಸುಧೀರ್ ಪೈ, ಡಾ. ಕಾರ್ತಿಕ್ ನಾಗೇಶ್, ಡಾ. ಅಶೀಶ್ ಶಾ ಜತೆಗೆ ನವರತನ್ ಜ್ಯುವೆಲರ್ಸ್ನ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಫೆಬ್ರವರಿ ಮತ್ತು ಮಾರ್ಚ್ ಅವಧಿಗೆ 2ನೇ ಅಲೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದನ್ನು ಮರೆಯಬಾರದು. ಇದು ನಮ್ಮ ಜೀವನದ ಒಂದು ಭಾಗವೆಂದು ನಾವು ತಿಳಿದುಕೊಳ್ಳಬೇಕೆಂದು ಡಾ. ಮಂಜುನಾಥ್ ತಿಳಿಸಿದರು.
ಸಾಧಕರಿಗೆ ಸನ್ಮಾನ
ಕರೊನಾ ಯೋಧರಾದ ವೈದ್ಯರು ಹಾಗೂ ಕ್ರೀಡಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ನವರತನ್ ಜ್ಯುವೆಲರ್ಸ್ನ ಸಹ ವ್ಯವಸ್ಥಾಪಕ ನಿರ್ದೇಶಕ (ಜೆಎಂಡಿ) ನಿರ್ಮಲ್ ಕುಮಾರ್, ನಿರ್ದೇಶಕರಾದ ಅಶೋಕ್ ಕುಮಾರ್, ಮಿತೇಶ್ ಬಾಪ್ನಾ, ವಿನೋದ್ ಕುಮಾರ್, ಸಿಎಫ್ಒ ಗ್ಯಾನ್ ಚಂದ್ ಮತ್ತಿತರರು ಇದ್ದರು.
ಹವ್ಯಾಸಿ ರೂಪದರ್ಶಿಗಳು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಇದೊಂದು ಉತ್ತಮವಾದ ವೇದಿಕೆಯಾಗಿದೆ. ಇವರ ಪ್ರೋತ್ಸಾಹ ಇದೇ ರೀತಿ ಇರಲಿ ಎಂದು ಕೇಳುತ್ತೇನೆ. | ಆರ್.ಚಂದ್ರಕಲಾ ವಿಜೇತ ರೂಪದರ್ಶಿ ನಮ್ಮ ಕ್ರೀಡಾ ಸಾಧನೆಯನ್ನು ಗುರುತಿಸಿ ಗೌರವಿಸಿರುವುದಕ್ಕೆ ಖುಷಿಯಾಗುತ್ತಿದೆ. ಇದರಿಂದ ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. | ಖುಷಿ ದಿನೇಶ್ ರಾಷ್ಟ್ರೀಯ ಈಜು ಚಾಂಪಿಯನ್ ಈ ರೀತಿಯ ಕಾರ್ಯಕ್ರಮಕ್ಕೆ ವಿಜಯವಾಣಿ ಸಹಯೋಗ ನೀಡುತ್ತಿರುವುದು ಖುಷಿಯ ವಿಚಾರ. ನನ್ನ ಸಾಧನೆ ಗುರುತಿಸಿ ಗೌರವಿಸಿದ ನವರತನ್ ಜ್ಯುವೆಲರ್ಸ್ಗೆ ಋಣಿಯಾಗಿದ್ದೇನೆ. | ಅನಘಾ ಮುರಳಿಪ್ರಸಾದ್ ರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ