

ಕುರುಗೋಡು: ಕಲೆ ಯಾರ ಸ್ವತ್ತಲ್ಲ. ಪ್ರತಿಭೆ ಇದ್ದರೂ ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.
ಕುಡತಿನಿ ಪಟ್ಟಣದಲ್ಲಿ ಏರ್ಪಡಿಸಿದ್ದ 17ನೇ ವರ್ಷದ ಗಣೇಶೋತ್ಸವದಲ್ಲಿ ಮಾತನಾಡಿದರು. ಗ್ರಾಮೀಣ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ಅಲ್ಲದೆ ನಾನು ಕೂಡ ಯಾರಿಗೂ ಬೇಡವಾಗಿ ಅನುಭವಿಸಿದ ಕಷ್ಟ ಹಾಗೂ ನೋವು ನನ್ನಲ್ಲಿ ಗೆಲ್ಲುವ ಛಲ ಹುಟ್ಟಿಸಿತು.
ಅದರಂತೆ ನೃತ್ಯ, ಜಾನಪದ ಸಾಹಿತ್ಯದ ಕಡೆ ಗಮನ ಹರಿಸಿ ಯಶಸ್ಸು ಕಾಣಲು ಸಾಧ್ಯವಾಯಿತು. ಕಷ್ಟ, ನೋವು, ಅವಮಾನ ಮೆಟ್ಟಿ ನಿಂತು ಧೈರ್ಯದಿಂದ ಸಾಧನೆಯತ್ತ ಸಾಗಬೇಕು ಎಂದರು.
ಎಸ್‌ಐ ಶಾಂತಮೂರ್ತಿ, ಪ್ರಮುಖ ರಾಮು, ವಿರೂಪಾಕ್ಷಿ, ಎಂ.ವೆಂಕಟೇಶ್, ದೊಡ್ಡಪ್ಪ, ತಿಮ್ಮಪ್ಪ, ಪಪಂ ಅಧ್ಯಕ್ಷೆ ಬಸಮ್ಮ ಚಂದ್ರಪ್ಪ, ಉಪಾಧ್ಯಕ್ಷ ಕನೇಕೆರಿ ಪಂಪಾಪತಿ, ರಾಘವೇಂದ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೀರೇಂದ್ರ ಪ್ರಸಾದ್, ವಿ.ರಾಜಶೇಖರ, ವೆಂಟಕರಮಣ ಇತರರಿದ್ದರು.