ಖಿಲಾರಹಟ್ಟಿಯಲ್ಲಿ ಕರಿ ಸಂಭ್ರಮ

Curry Festival in Khilarahatti
ಮುದ್ದೇಬಿಹಾಳ ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಕಾರಹುಣ್ಣಿಮೆಯ ಕರಿ ಹರಿಯುವ ಸಂಭ್ರಮಕ್ಕೆ ಎ.ಎನ್​.ಮದರಿ ಚಾಲನೆ ನೀಡಿದರು. ಹಣಮಂತ ಗುಡ್ಲಮನಿ ಇತರರಿದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಕಾರ ಹುಣ್ಣಿಮೆಯ ಕರಿ ಹರಿಯುವ ಸಂಭ್ರಮವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಗಾರು ಆರಂಭದ ರೈತರ ಮೊದಲ ಹಬ್ಬವಾಗಿರುವ ಕಾರ ಹುಣ್ಣಿಮೆ ನಿಮಿತ್ತ ರೈತರು ಎತ್ತುಗಳ ಮೈ ತೊಳೆದು ಸ್ವಚ್ಛಗೊಳಿಸಿದರು.

ಬಣ್ಣ, ಗೆಜ್ಜೆ, ಗೊಂಡೆ, ಸರಗಳಿಂದ ಸಿಂಗರಿಸಿ ಸಂಭ್ರಮಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ 40ಕ್ಕೂ ಹೆಚ್ಚು ಜೋಡೆತ್ತುಗಳು ಮೆರವಣಿಗೆಯಲ್ಲಿ ಸಂಚರಿಸಿ ರೈತರ ಹುಮ್ಮಸ್ಸು ಹೆಚ್ಚಿಸಿದವು. ನವ ವಧುವಿನಂತೆ ಸಿಂಗರಿಸಿದ್ದ ಎತ್ತುಗಳ ಮೆರವಣಿಗೆಯಲ್ಲಿ ಕರಡಿ ಮಜಲು ವಾದ್ಯ ಮೇಳ, ಜೋಗತಿಯರ ನೃತ್ಯ ಹಬ್ಬದ ಕಳೆ ಹೆಚ್ಚಿಸಿದವು.

ಮೆರವಣಿಗೆ ಮುಗಿದ ಮೇಲೆ ಗ್ರಾಮದ ಅಗಸಿಯಲ್ಲಿ ಕರಿ ಹರಿದು ಎತ್ತುಗಳನ್ನು ಓಡಿಸಿ ರೈತರು ಹರ್ಷ ಪಟ್ಟರು. ಪ್ರಗತಿಪರ ರೈತ, ಉದ್ಯಮಿ, ತಾಲೂಕು ಕುರುಬರ ಸಂದ ಅಧ್ಯ ಎಂ.ಎನ್​.ಮದರಿ ಅವರ ಸಹೋದರ ಎ.ಎನ್​.ಮದರಿ ಅವರು ಕರಿ ಹರಿಯುವ ಕಾರ್ಯ ಉದ್ಘಾಟಿಸಿದರು. ಪ್ರಮುಖರಾದ ಹಣಮಂತ ಗೂಡ್ಲಮನಿ, ಗದ್ದೆಪ್ಪ ಕದ್ದೆನಹಳ್ಳಿ, ಗುರಣ್ಣ ಹಾದಿಮನಿ, ನಿಂಗಣ್ಣ ಪೂಜಾರಿ, ಯಲ್ಲಪ್ಪ ಗೂಡ್ಲಮನಿ, ಬಿ.ಎಸ್​.ಮದರಿ, ರಾಮಣ್ಣ ಗೋಗಿ, ಮುತ್ತಣ್ಣ ಗೂಡ್ಲಮನಿ, ಗ್ರಾಪಂ ಸದಸ್ಯರಾದ ನೀಲಪ್ಪ ಮದರಿ, ಕಾಶೆಪ್ಪ ಮಾದರ, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net