ಹಾವೇರಿ, ಹಾನಗಲ್ಲ ವಿವಿಧೆಡೆ ವಿದ್ಯುತ್ ವ್ಯತ್ಯಯ ಜೂ. 21ರಂದು

hescom office
Published on

ಹಾವೇರಿ: ನಗರದ 110 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರದಲ್ಲಿ ಕಾಮಗಾರಿ ನಿಮಿತ್ತ ಜೂ. 21ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಇಲ್ಲಿಯ ರಾಜೇಂದ್ರನಗರ, ನಗರ ಪೊಲೀಸ್ ಠಾಣೆ, ವಿದ್ಯಾನಗರ, ಗಾಂಧಿ ಸರ್ಕಲ್, ಎಂ.ಜಿ. ರೋಡ್, ಎಲ್‌ಬಿಎಸ್ ಮಾರ್ಕೆಟ್, ಶಿವಲಿಂಗ ನಗರ, ಗುತ್ತಲ ರೋಡ್, ಮೆಹಬೂಬ ನಗರ, ಗೂಗಿಕಟ್ಟೆ, ಮಣೆಗಾರ ಓನಿ, ರಾಣೆಬೆನ್ನೂರ ರೋಡ್, ಏಲಕ್ಕಿ ಓಣಿ, ಅಕ್ಕಿಪೇಟೆ ಬಡಾವಣೆಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ರಾಣೆಬೆನ್ನೂರ: ನಗರದ 220 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜೂ. 21ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ತಾಲೂಕಿನ ಹಲಗೇರಿ, ಬಿಲ್ಲಹಳ್ಳಿ, ದಂಡಗಿಹಳ್ಳಿ, ಹಾರೋಗೊಪ್ಪ, ಆಲದಕಟ್ಟಿ, ಅಂತರವಳ್ಳಿ, ನಂದಿಹಳ್ಳಿ, ಲಿಂಗದಹಳ್ಳಿ, ಮಣಕೂರ, ನಿಟ್ಟೂರು, ಕೊಣನತಲಿ, ಯಲಬಡಗಿ, ಗೊಡಿಹಾಳ, ಗುಡ್ಡದಬೇವಿನಹಳ್ಳಿ, ಗುಡ್ಡದಹೊಸಳ್ಳಿ, ಹೆಡಿಯಾಲ, ಜೋಯಿಸರಹರಳಹಳ್ಳಿ, ಬೆನಕನಕೊಂಡ, ಉಕ್ಕುಂದ, ಸುಣಕಲ್ಲಬಿದರಿ, ತಿರುಮಲದೇವರಕೊಪ್ಪ, ಕುಸಗೂರ, ಸರವಂದ, ನಾಗೇನಹಳ್ಳಿ, ಹೊಳೆಆನ್ವೇರಿ, ಮಲ್ಕನಹಳ್ಳಿ, ಮುದೇನೂರು, ಹನುಮನಹಳ್ಳಿ, ತೆರೆದಹಳ್ಳಿ, ಕೃಷ್ಣಾಪುರ, ಮುಷ್ಟೂರು, ಇಟಗಿ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಹಾನಗಲ್ಲ: 110, 33, 11 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಿಮಿತ್ತ ಜೂ. 21ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 110 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರದಿಂದ ಹೊರಡುವ 33 ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬೆಳಗಾಲಪೇಟೆ, ಬೊಮ್ಮನಹಳ್ಳಿ, ಪಾಳಾ, ಲಕ್ಷ್ಮೀಪುರ, ಅಕ್ಕಿಆಲೂರ ವಿ.ವಿ. ಕೇಂದ್ರ ಹಾಗೂ 11 ಕೆವಿ ಮಾರ್ಗಗಳಾದ ಹಾನಗಲ್ಲ ಪಟ್ಟಣ ಸೇರಿದಂತೆ, ಕರಗುದರಿ ನೀರಾವರಿ ಪಂಪ್‌ಸೆಟ್ ಮಾರ್ಗ, ಬೈಚವಳ್ಳಿ ನಿರಂತರ ಜ್ಯೋತಿ ಮಾರ್ಗ, ಕೊಪ್ಪರಸಿಕೊಪ್ಪ, ಅಕ್ಕಿಆಲೂರ, ನವೋದಯ ವಿದ್ಯಾಲಯ ಮತ್ತು ಬೈಚವಳ್ಳಿ ನೀರಾವರಿ ಪಂಪ್‌ಸೆಟ್ ಮಾರ್ಗಗಳಿಂದ ವಿದ್ಯುತ್ ವಿತರಣೆಯಾಗುವ ಎಲ್ಲ ಗ್ರಾಮಗಳಿಗೆ ಹಾಗೂ ಪಟ್ಟಣಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಹೆಸ್ಕಾಂ ಎಇಇ ಎಸ್.ಎಸ್. ಜಿಂಗಾಡೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net