ಬಿಲ್‌ ಬಾಕಿ ಸರ್ಕಾರಿ ಕಚೇರಿಗಳ ವಿದ್ಯುತ್‌ ಸಂಪರ್ಕ ಕಟ್‌

current cut
Published on

ಕಾರವಾರ: ಬಿಲ್ ತುಂಬದ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತ ಮಾಡುವ ಮೂಲಕ ಹೆಸ್ಕಾಂ ಕಠಿಣ ಕ್ರಮ ಕೈಗೊಂಡಿದೆ.ಹೆಸ್ಕಾA ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರಿ ಇಲಾಖೆಗಳಿಗೆ ಸೇರಿದ 13653 ಮೀಟರ್‌ಗಳಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 13.09 ಕೋಟಿ ರೂ. ಬಿಲ್ ಬಾಕಿ ಇದೆ. ಸಾಕಷ್ಟು ನೋಟಿಸ್ ನೀಡಿ, ಸಂಧಾನ ನಡೆಸಿದರೂ ಹಣ ಬಾರದ ಕಾರಣ ಹೆಸ್ಕಾಂ ಇಲಾಖೆಗಳ ವಿರುದ್ಧವೇ ಸಮರ ಸಾರಿದೆ.

ವಿದ್ಯುತ್ ಬಿಲ್ ಕಟ್ಟದ ಕಾರವಾರದ ಸರ್ಕಾರಿ ಕಚೇರಿಗಳ 15 ಕ್ಕೂ ಹೆಚ್ಚು ಮೀಟರ್‌ಗಳ ವಿದ್ಯುತ್ ಸಂಪರ್ಕವನ್ನು ಗುರುವಾರ ಕಡಿತ ಮಾಡಲಾಯಿತು. ಇದರಿಂದ ಕಚೇರಿ ಕಾರ್ಯಗಳು ಸ್ಥಗಿತವಾದವು. ಹೆಸ್ಕಾಂ ವ್ಯಾಪ್ತಿಯ ಎಲ್ಲೆಡೆ ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಕೆಲಸ ಸ್ಥಗಿತ:

ಪ್ರಮುಖವಾಗಿ ಕಾರವಾರ ಎಸಿ ಕಚೇರಿ, ತಹಸೀಲ್ದಾರ್ ಕಚೇರಿ, ಶಾಸಕರ ಕಚೇರಿ ಹಾಗೂ ಜಿಲ್ಲಾ ನೋಂದಾಣಾಽಕಾರಿ ಕಚೇರಿಯ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಿಲ್ ಪಾವತಿ ಸುಮಾರು 9 ತಿಂಗಳಿAದ ಬಾಕಿ ಇದ್ದು, ಗುರುವಾರ ಎಲ್ಲ ಕಡೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಯಿತು. ಕಾರವಾರ ತಹಸೀಲ್ದಾರ್ ಕಚೇರಿಯಲ್ಲಿ ಕೆಲ ಹೊತ್ತು ಬ್ಯಾಟರಿ ಮೇಲೆ ಕೆಲಸ ಕಾರ್ಯಗಳು ನಡೆದವು. ನಂತರ ಬಂದ್ ಆದವು. ನಂತರ ದಾಖಲೆಗಳನ್ನು ಪಡೆಯಲು ಆಗಮಿಸಿದ ಸಾರ್ವಜನಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಬಿಲ್ ತುಂಬದೇ ಸಂಪರ್ಕ ಕಡಿತ ಮಾಡಲಾಗಿದೆ ಎಂದು ಹೇಳಲಾಗದೇ ಮುಜುಗರ ಅನುಭವಿಸಿದರು.

ಬಿಲ್ ಕಟ್ಟಲೂ ಹಣವಿಲ್ಲವೇ..?

ಒಂದೆಡೆ ಸರ್ಕಾರದ ಸೂಚನೆಯಂತೆ ಹೆಸ್ಕಾಂ ಸಾರ್ವಜನಿಕರಿಗೆ 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಇನ್ನೊಂದೆಡೆ ಸರ್ಕಾರಿ ಇಲಾಖೆಗಳೇ ಹೆಸ್ಕಾಂಗೆ ಹಣ ಭರಿಸಲು ಸಾಧ್ಯವಾಗದೇ ತೊಂದರೆಪಡುತ್ತಿರುವುದು ವಿಪರ್ಯಾಸ. `ಸರ್ಕಾರದ ಬಳಿ ಕರೆಂಟ್ ಬಿಲ್ ಕಟ್ಟಲೂ ದುಡ್ಡಿಲ್ಲವೇ ..?' ಎಂದು ತಹಸೀಲ್ದಾರ್ ಕಚೇರಿಗೆ ಬಂದ ಸಾರ್ವಜನಿಕರು ಸಿಬ್ಬಂದಿಯ ಬಳಿ ಹೀಯಾಳಿಸಿ ಮಾತನಾಡುತ್ತಿರುವುದು ಕಂಡುಬAತು.

ಯಾವ ಇಲಾಖೆ ಎಷ್ಟು ಬಾಕಿ

  • ಗ್ರಾಮೀಣಾಭಿವೃದ್ಧಿ ಇಲಾಖೆ( ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ)- 4.89 ಕೋಟಿ ರೂ.
  • ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಿಲ್ ಬಾಕಿ - 1.57 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ (ಬೀದಿ ದೀಪ, ಕುಡಿಯುವ ನೀರು, ಕಚೇರಿ ಸೇರಿ) -1.29 ಕೋಟಿ ರೂ.
  • ಶಿಕ್ಷಣ ಇಲಾಖೆ (ಶಾಲೆಗಳು ಸೇರಿ) -67.78 ಲಕ್ಷ ರೂ.
  • ಕರ್ನಾಟಕ ನೀರಾವರಿ ನಿಗಮ -60.93 ಲಕ್ಷ ರೂ.
  • ಆರೋಗ್ಯ ಇಲಾಖೆ (ಆಸ್ಪತ್ರೆಗಳು ಸೇರಿ) -48.87 ಲಕ್ಷ ರೂ.
  • ಅರಣ್ಯ ಇಲಾಖೆ -31.47 ಲಕ್ಷ ರೂ.
  • ಮಹಿಳಾ ಮತ್ತು (ಅಂಗನವಾಡಿಗಳು ಸೇರಿ) -16.85 ಲಕ್ಷ ರೂ.
  • ಕಂದಾಯ ಇಲಾಖೆ (ಮುಜರಾಯಿ ಸೇರಿ) -15.05 ಲಕ್ಷ ರೂ.
  • ಗೃಹ ಇಲಾಖೆ (ಪೊಲೀಸ್ ಸೇರಿ) -13.21 ಲಕ್ಷ ರೂ.
  • ಬಿಲ್ ವಸೂಲಿ ಪ್ರಕ್ರಿಯೆ ನಿರಂತರವಾಗಿ ನಡೆಯತ್ತಿರುತ್ತದೆ. ಕುಡಿಯುವ ನೀರು, ಆಸ್ಪತ್ರೆ, ನ್ಯಾಯಾಲಯ, ಪೊಲೀಸ್ ಸೇರಿ ಉಳಿದ ಯಾವುದೇ ಇಲಾಖೆಗಳು ಬಿಲ್ ಕಟ್ಟದೇ ಇದ್ದರೆ ನಾವು ಕಾಲಕಾಲಕ್ಕೆ ನೋಟಿಸ್ ನೀಡುತ್ತೇವೆ. ಮತ್ತೂ ಕಟ್ಟದೇ ಇದ್ದರೆ ಸಂಪರ್ಕ ಕಡಿತ ಮಾಡುತ್ತೇವೆ. ಕಾರವಾರ ಉಪವಿಭಾಗದಲ್ಲಿ ಕೆಲವು ಕಚೇರಿಗಳಿಂದ ಸಾಕಷ್ಟು ಹಣ ಬಾಕಿ ಇರುವ ಕಾರಣಕ್ಕೆ ಸಂಪರ್ಕ ಕಡಿತ ಮಾಡಲಾಗಿದೆ.
  • ಪುರುಷೋತ್ತಮ ಮಲ್ಯ ಅಧೀಕ್ಷಕ  ಇಂಜಿನಿಯರ್, ಹೆಸ್ಕಾಂ ಶಿರಸಿ ವೃತ್ತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net