ಚಿಕಿತ್ಸೆ ಪಡೆದರೆ ಗುಣವಾಗಲಿದೆ ಕಾಯಿಲೆ

30 Sirwar 1
Published on

ಸಿರವಾರ: ಕುಷ್ಠರೋಗದ ಬಗ್ಗೆ ಭಯಪಡದೆ, ಅದರ ನಿರ್ಮೂಲನೆಗೆ ಎಲ್ಲರೂ ಸಹಕಾರ ನೀಡಬೇಕೆಂದು ವೈದ್ಯಾಧಿಕಾರಿ ಸುನೀಲ್ ಸರೋದೆ ಹೇಳಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಷ್ಠರೋಗ ನಿರ್ಮೂಲನೆ ಜಾಥಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಕುಷ್ಠರೋಗ ಮುಕ್ತ ಭಾರತಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಕುಷ್ಠ ಅಂಟು ರೋಗವಲ್ಲ. ಈ ಹಿನ್ನೆಲೆಯಲ್ಲಿ ಕುಷ್ಠದ ಬಗ್ಗೆ ಭಯಪಡದೆ ಜಾಗೃತಿ ಹೊಂದಬೇಕು. ಕುಷ್ಠ ಚಿಕಿತ್ಸೆ ಪಡೆದರೆ ವಾಸಿಯಾಗಲಿದ್ದು, ರೋಗಮುಕ್ತ ಸಮಾಜಕ್ಕಾಗಿ ಶ್ರಮಿಸಬೇಕಿದೆ. ದೇಹದ ಯಾವುದೇ ಭಾಗದಲ್ಲಿ ಬಿಳಿ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಛೆ ಇದ್ದರೆ ಕೂಡಲೇ ವೈದ್ಯರ ಬಳಿ ಪರೀಕ್ಷೆಗೊಳಪಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net