

ಗದಗ: ಇಂದಿನ ವಾಣಿಜ್ಯೀಕರಣದ ದಿನಮಾನದಲ್ಲಿ ವೇಗದ ಬದುಕು ಆಢಂಬರ ಮತ್ತು ಒತ್ತಡ ಮನಸ್ಥಿತಿಯಿಂದ. ಲಾಭವೆಂಬ ಲೋಬಿತನದಲ್ಲಿ ಸಂಬಧದ ಸಾತ್ವಿಕ ಗುಣ ಮಾಯವಾಗಿ ಕೇವಲ ಹಣದ ಆಮೇಶದಲ್ಲಿ ಜೀವನ ನಾಗಾಲೋಟದ ಕುದುರೆಯಾಗಿದೆ. ಇದರಿಂದ ಮನುಷ್ಯಯಾರನ್ನು ಅಭಿಮಾನ ಪ್ರೀತಿ ಕರುಣೆಯಿಂದ ನೋಡುವ ಕಾಲ ದೂರವಾಗಿದೆ. ಸತ್ಯ ಶಾಂತಿ ಪ್ರೀತಿಯನ್ನು ಮರೆಯುತಿದ್ದಾನೆ. ಮನುಷ್ಯ ನಿಶ್ಚಿಂತನಾಗಬೇಕಾದರೆ ನಿರಾಳನಾಗಿರಲು ಬೇರೆಯವನ್ನು ಗೌರವದಿಂದ ಕಾಣಬೇಕು. ಅಭಿನಂದಿಸುವ ಗುಣವಿರಬೇಕು ಬೇಡವಾದ ಮನಸ್ಥಿತಿಯನ್ನು ದೂರವಿಟ್ಟು ಒಳ್ಳೆಯ ಸಾತ್ವಿಕ ಗುಣಗಳನ್ನು ರೂಢಿಸಿಕೊಂಡಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ಮತ್ತು ವ್ಯಕ್ತಿಯನ್ನು ಕಾಣಲು ಸಾಧ್ಯ ಎಂದು ಹಿರಿಯ ಸಾಹಿತಿಗಳಾದ ಅಂದಾನೆಪ್ಪ ವಿಭೂತಿ ಅಭಿಪ್ರಾಯಪಟ್ಟರು.
ನಗರದ ಕೃಷ್ಣ ಗ್ರಾಮೀಣಾಭಿವೃದ್ದಿ ಶಿಕ್ಷಣ ಸಂಸ್ಥೆ, ಗದಗ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಇವುಗಳ ಸಹಯೋಗದಲ್ಲಿ ಎಂಟು ತಂತಿ ಕನ್ನಡ ಜ್ಞಾನಪೀಠ ದರ್ಶನಂ ಎಂಬ ದೃಶ್ಯಕಾವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಕನ್ನಡ ಸಾಹಿತ್ಯ ಪರಿಷತ್ತು ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸುತ್ತ ಜ್ಞಾನಪೀಠ ಪುರಸ್ಕೃತರನ್ನು ಮಕ್ಕಳಿಗೆ ಪರಿಚಯಿಸುವ ಉದ್ದೇಶವನ್ನು ಹೊಂದಿ ವೇಶಭೂಷಣದ ಮೂಲಕ ಅವರನ್ನು ಪರಿಚಯಿಸುವದು ಮತ್ತು ಕಾವ್ಯ ವಾಚಿಸುವ ಮೂಲಕ ದಿಗ್ಗಜರನ್ನು ನೆನಪಿಸುವ ಈ ಪರಿಕಲ್ಪನೆ ಅತ್ಯಂತ ಸಮರ್ಪಕವಾದದ್ದು. ಕೃಷ್ಣಾ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಶ್ರಯಸ್ಸಿಗೆ ಶ್ರಮಿಸುತ್ತಿದೆ. ಹಗಲು ರಾತ್ರಿಯನ್ನದೆ ವಿದ್ಯಾರ್ಥಿಗಳ ಭವಿಷ್ಯರೂಪಿಸುವಲ್ಲಿ ಶ್ರೀಮತಿ ಪ್ರಿಯಾ ಹುಯಿಲಗೋಳ ಶ್ರಮಿಸುತಿದ್ದಾರೆ. ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ವಿಶೇಷ ಚಟುವಟಿಕೆಗಳನ್ನು ರೂಪಿಸಿ ಉತ್ತಮ ಅಂಕ ಪಡೆಯುವಲ್ಲಿ ಪ್ರೇರೇಪಿಸುತಿದ್ದಾರೆ. ಇದರಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಹಿಂದುಳಿದ ವಿದ್ಯಾರ್ಥಿಗಳನ್ನು ಬೆಳೆಸುವಲ್ಲಿ ಶ್ರಮಿಸಬೇಕುಎಂದು ಅಭಿನಂದನಾ ಮಾತುಗಳನ್ನಾಡಿದರು.
ಇನ್ನೋರ್ವ ಅತಿಥಿಗಳಾದ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ರಾಜೇಂದ್ರಗಡಾದ ಮಾತನಾಡಿ ಜ್ಞಾನಪೀಠಪ್ರಶ್ತಿ ಪುರಸ್ಕೃತರ ಸಾಮಿಪ್ಯ ಮತ್ತು ಅವರೊಂದಿಗಿನ ಮಾತಿನ ಅವಕಾಶವನ್ನು ಹಂಚಿಕೊAಡರು. ದ.ರಾ ಬೇಂದ್ರೆಯವರAತಹವರು ಬದುಕವನ್ನು ಬರಹವನ್ನಾಗಿಸಿಕೊಂಡವರು. ಕುವೆಂಪುರವರ ಚಿಂತನೆಗಳ ಮೂಲಕ ವiಹಾಗ್ರಂಥವನ್ನು ಈ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಕವಿಗಳು ಭಾವಲೊಕದ ಬೃಂಗದAತೆ ತನ್ನ ಕಾವ್ಯ ಲೋಕದ ಗುಂಗಿನಲ್ಲಿ ಬದುಕಿನ ಸತ್ವವವನ್ನು ಈ ಜಗತ್ತಿಗೆ ನೀಡಿದ್ದಾರೆ. ಹುಯಿಲಗೋಳ ನಾರಾಯಣರಾಯರು ಉದಯವಾಗಲಿ ಚಲುವ ಕನ್ನಡ ನಾಡು ಎಂಬ ಅರ್ಥ ಪೂರ್ಣ ಸಾಹಿತ್ಯವನ್ನು ನೀಡಿದ್ದಾರೆ ಎಂದು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪ್ರೀಯಾ ಹುಯಿಲಗೋಳ. ಉಪಸ್ಥಿತಿಯನ್ನು ಕ.ಸಾ.ಪ ಅಧ್ಯಕ್ಷರಾದ ಡಾ. ರಶ್ಮಿ ಅಂಗಡಿ ವಹಿಸಿದ್ದರು ಅತಿಥಿಗಳಾಗಿ ಶ್ರೀಮತಿ ಲೀಲಾಬಾಯಿ ದಪ್ತೆರದಾರ, ಯಲ್ಲಪ್ಪ ಮಾಸ್ತರ ವಹಿಸಿದ್ದರು ದಾನಮ್ಮ ಪೂಜಾರ, ಶ್ರೀನಿವಾಸ ತಂಬ್ರಳ್ಳಿ, ಅನ್ವಿತಾ ಹುಯಿಲಗೋಳ, ಹಯವದನ, ಕುಲಕರ್ಣಿ, ಸಂಗಮೇಶ ಎಸ್ ವೈಷ್ಣವಿ, ಸೃಷ್ಠಿ ಕೊರ್ಲಳ್ಳಿ ಸ್ನೇಹ ಬೂದೂರಜ್ಞಾನ ಪೀಠ ಪುರಸ್ಕೃತರ ವೇಶ ಭೂಷಣದೊಂದಿಗೆ ವಾಚನ ಮಾಡಿದರು. ಪ್ರತಿಭಾನ್ವಿತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು ಕ.ಸಾಪ ಕಾರ್ಯದರ್ಶಿ ಬಸವರಾಜ ನೆಲಜೇರಿ, ನಿರೂಪಿಸಿದರು ಪವಮಾನ ನಾಮಾವಳಿ ವಂದಿಸಿದರು. ಸಂಜೀವ ಸ್ವಾಗತಿಸಿ ಪರಿಚಯಿಸಿದರು .